ದೇವಸ್ಥಾನಲ್ಲಿ ಜಾರಿ ಬಿದ್ದು ಪಕ್ಕೆಲುಬಿಗೆ ಪೆಟ್ಟು ಮಾಡಿಕೊಂಡ ಶಾಸಕ ಹೆಚ್ ಡಿ ರೇವಣ್ಣ
ಲೈಂಗಿಕ ಅಪರಾಧಗಳನ್ನೆಸಗಿರುವ ಅರೋಪಗಳಲ್ಲಿ ರೇವಣ್ಣರ ಇಬ್ಬರೂ ಮಕ್ಕಳು ಜೈಲು ಸೇರಿದ್ದಾರೆ ಮತ್ತು ಯಾವಾಗ ಬಿಡುಗಡೆ ಹೊಂದುತ್ತಾರೋ ಗೊತ್ತಿಲ್ಲ. ರೇವಣ್ಣ ಮತ್ತು ಅವರ ಪತ್ನಿ ಭವಾನಿ ಕೂಡ ಬೇರೆ ಬೇರೆ ಅಪರಾಧಗಳ ಆರೋಪದಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ.
ಹಾಸನ: ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣರ ಗ್ರಹಗತಿಯೇ ಸರಿ ಇದ್ದಂತಿಲ್ಲ ಮಾರಾಯ್ರೇ. ಏಟಿನ ಮೇಲೆ ಏಟು ಪೆಟ್ಟಿನ ಮೇಲೆ ಪೆಟ್ಟು, ಮಾನಸಿಕವಾಗಿ ಘಾಸಿ ಮತ್ತು ದೈಹಿಕವಾಗಿಯೂ ಗಾಯ. ಏನಾಗಿದೆಯೆಂದರೆ ನಿನ್ನೆ ವಿಧಾನಸಭಾ ಅಧಿವೇಶನದಲ್ಲಿ ಭಾಗಿಯಾಗಿದ್ದ ಅವರು ರಾತ್ರಿ ತಮ್ಮೂರು ಹೊಳೆನರಸೀಪುರಕ್ಕೆ ಬಂದಿದ್ದಾರೆ. ಏಕಾದಶಿ ಪ್ರಯುಕ್ತ ಉಪವಾಸ ಆಚರಿಸುತ್ತಿದ್ದ ರೇವಣ್ಣ ಬೆಳಗಾಗ ಎದ್ದು ಹರದನಹಳ್ಳಿಯ ದೇವೇಶ್ವರ ಗುಡಿ ಪೂಜೆ ಸಲ್ಲಿಸಲು ಹೋಗಿದ್ದಾರೆ. ಪೂಜೆ ಮುಗಿಸಿಕೊಂಡು ವಾಪಸ್ಸಾಗುವಾಗ ಕಾಲು ಜಾರಿ ಬಿದ್ದಿದ್ದಾರೆ ಮತ್ತು ಅವರ ಪಕ್ಕೆಲುಬಿಗೆ ಪೆಟ್ಟು ಬಿದ್ದಿದೆ. ಕೂಡಲೇ ಅವರನ್ನು ಹೊಳೆನರಸೀಪುರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಚಿಕಿತ್ಸೆ ಪಡೆದು ಕೊಂಚ ಹೊತ್ತು ವಿಶ್ರಮಿಸಿದ ಬಳಿ ರೇವಣ್ಣ ಬೆಂಗಳೂರು ಕಡೆ ಹೊರಟರೆಂದು ನಮ್ಮ ಹಾಸನ ವರದಿಗಾರ ಹೇಳಿದ್ದಾರೆ. ಕಳೆದ ಎರಡು ಮೂರು ತಿಂಗಳುಗಳಿಂದ ರೇವಣ್ಣ ಕುಟುಂಬಕ್ಕೆ ಆಪತ್ತುಗಳ ಸರಮಾಲೆ ಎದುರಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಒಂಟಿತನಕ್ಕೆ ಒಗ್ಗಿಕೊಳ್ಳುತ್ತಿರುವ ಹೆಚ್ ಡಿ ರೇವಣ್ಣ ಒಂಟಿಯಾಗಿಯೇ ಸದನದಿಂದ ಹೊರಬಂದರು!