Video: ನಾಗೇಂದ್ರ ಪತ್ನಿ ವಿಚಾರಣೆ ಅಂತ್ಯ: ಹೇಗೆ ಕರೆತಂದಿದ್ದರೋ ಹಾಗೇ ಬಿಟ್ಟುಬಂದ ಇಡಿ ಅಧಿಕಾರಿಗಳು
ವಾಲ್ಮೀಕಿ ನಿಗಮದ ಬ್ರಹ್ಮಾಂಡ ಭ್ರಷ್ಟಾಚಾರದ ರಹಸ್ಯ ಬಗೆದಷ್ಟು ಬಯಲಾಗುತ್ತಿದೆ. ಇಂದು ನಾಗೇಂದ್ರ ಪತ್ನಿ ಮಂಜುಳಾರನ್ನ ಇಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು, ಇದೀಗ ವಿಚಾರಣೆ ಅಂತ್ಯವಾಗಿದೆ. ಹಾಗಾಗಿ ಮನೆಯಿಂದ ಹೇಗೆ ಕರೆತಂದಿದ್ದರೊ ಹಾಗೇ ಇದೀಗ ಇಡಿ ಅಧಿಕಾರಿಗಳು ಅವರನ್ನು ಬಿಟ್ಟುಬಂದಿದ್ದಾರೆ.
ಬೆಂಗಳೂರು, ಜುಲೈ 17: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ (ED) ಅಧಿಕಾರಿಗಳಿಂದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ (B. Nagendra) ಪತ್ನಿ ಮಂಜುಳಾ ವಿಚಾರಣೆ ಇದೀಗ ಅಂತ್ಯವಾಗಿದೆ. ಬೆಂಗಳೂರಿನ ಶಾಂತಿನಗರದಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆ ಮಾಡಿದ್ದು, ನಾಗೇಂದ್ರ ರಾಮ್ಕಿ ಉತ್ಸವ್ ಅಪಾರ್ಟ್ಮೆಂಟ್ಗೆ ಇಡಿ ತಂಡ ಬಿಟ್ಟುಹೋಗಿದೆ. ಬೆಳಗ್ಗೆ ಡಾಲರ್ಸ್ ಕಾಲೋನಿಯಲ್ಲಿರುವ ನಾಗೇಂದ್ರ ನಿವಾಸದಿಂದ ಕರೆತಂದು ವಿಚಾರಣೆ ಮಾಡಿದ್ದರು. ಇದೀಗ ವಿಚಾರಣೆ ಅಂತ್ಯ ಬಳಿಕ ಹೇಗೆ ಕರೆತಂದಿದ್ದರೊ ಹಾಗೇ ಬಿಟ್ಟುಬಂದಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos