‘ಕಿರುಕುಳ ಆದಾಗಲೇ ಹೇಳಿ, ಐದು ವರ್ಷ ಬಿಟ್ಟೇಕೆ ಬರುತ್ತೀರಿ’; ನಟಿಯ ಪ್ರಶ್ನೆ
ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಸಮಿತಿ ವರದಿಯಿಂದ ಸಂಚಲನ ಸೃಷ್ಟಿ ಆಗಿದೆ. ಅದೇ ರೀತಿ ಬೇರೆ ಭಾಷೆಯ ಚಿತ್ರರಂಗದಲ್ಲಿ ಕೂಡ ಮಹಿಳೆಯರ ಮೇಲೆ ಆಗುತ್ತಿರುವ ಕಿರುಕುಳದ ಬಗ್ಗೆ ಧ್ವನಿ ಎತ್ತಲಾಗುತ್ತಿದೆ. ಈ ಬಗ್ಗೆ ಕನ್ನಡ ಚಿತ್ರರಂಗದ ನಟಿ ಸಾಕ್ಷಿ ಮೇಘನಾ ಅವರು ಮಾತನಾಡಿದ್ದಾರೆ.
‘ಪದ್ಮಾವತಿ’, ‘ಲೀಸಾ’ ಸೇರಿದಂತೆ ಕನ್ನಡದ ಐದಾರು ಸಿನಿಮಾಗಳಲ್ಲಿ ಸಾಕ್ಷಿ ಮೇಘನಾ ಅವರು ನಟಿಸಿದ್ದಾರೆ. ಅವರು ಈಗ ಹಲವು ಆರೋಪ ಮಾಡಿದ್ದಾರೆ. ‘ಒಂದು ಘಟನೆ ನಡೆದಾಗ ಸುಮ್ಮನಿರುತ್ತೀರಿ. ಆದರೆ, ಐದಾರು ವರ್ಷ ಬಿಟ್ಟು ಆ ಬಗ್ಗೆ ಏಕೆ ಹೇಳುತ್ತಿರಾ? ಘಟನೆ ನಡೆದಾಗ ಕಾನೂನು ಇರಲಿಲ್ಲವಾ? ಇಂಡಸ್ಟ್ರಿ ಹೀಗೆ ಎಂದು ಅನೇಕರು ಭಾವಿಸಿದ್ದಾರೆ. ಅದನ್ನು ಈ ರೀತಿಯವರು ಮತ್ತೆ ಮತ್ತೆ ಸಾಬೀತು ಮಾಡುತ್ತಿದ್ದಾರೆ. ಹಿಂಸೆಯನ್ನು ಏಕೆ ತಡೆದುಕೊಳ್ಳುತ್ತೀರಿ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.