ಒಬ್ಬೊಬ್ರಿಗೆ ಕೊಡ್ತೀನಿ ನೋಡಿ; ಸಮಂತಾ ಎಚ್ಚರಿಕೆ ನೀಡಿದ್ದು ಯಾರಿಗೆ?

Updated on: Jun 16, 2026 | 12:02 PM

ದಕ್ಷಿಣ ಚಿತ್ರರಂಗದ ಸ್ಟಾರ್ ನಟಿ ಸಮಂತಾ ರುತ್ ಪ್ರಭು ಅವರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಹೆಡ್‌ಲೈನ್ ನೋಡಿ ಅಭಿಮಾನಿಗಳು ಒಂದು ಕ್ಷಣ ಶಾಕ್ ಆಗಿದ್ದಾರೆ. ಸಮಂತಾ ವೇದಿಕೆ ಮೇಲಿಂದಲೇ ಯಾರಿಗೆ ಎಚ್ಚರಿಕೆ ನೀಡುತ್ತಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಆದರೆ, ಇದು ಯಾವುದೇ ಕೋಪದ ಎಚ್ಚರಿಕೆಯಲ್ಲ, ಬದಲಿಗೆ ಸಿನಿಮಾ ಪ್ರಚಾರದ ಭಾಗವಾಗಿ ಸಮಂತಾ ಹೊಡೆದ ಮಾಸ್ ಡೈಲಾಗ್

ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಈ ಚಿತ್ರದ ಕಾರ್ಯಕ್ರಮವೊಂದರಲ್ಲಿ ಹಳದಿ ಸೀರೆಯಲ್ಲಿ ಕಂಗೊಳಿಸಿದ ಸಮಂತಾ, ಮೈಕ್ ಕೈಗೆತ್ತಿಕೊಳ್ಳುತ್ತಿದ್ದಂತೆ ಅಭಿಮಾನಿಗಳ ಸೀಟಿ, ಚಪ್ಪಾಳೆ ಮುಗಿಲು ಮುಟ್ಟಿತ್ತು. ಇದೇ ಖುಷಿಯಲ್ಲಿ ಮಾತನಾಡಿದ ಸಮಂತಾ, ತಮ್ಮ ಸಿನಿಮಾದ ಬಗ್ಗೆ ಭರವಸೆಯ ಮಾತುಗಳನ್ನಾಡುತ್ತಾ ತೆಲುಗಿನಲ್ಲಿ ಖಡಕ್ ಡೈಲಾಗ್ ಒಂದನ್ನು ಹೊಡೆದಿದ್ದಾರೆ. ‘ಈ ಸಿನಿಮಾದಿಂದ ನಾವು ಒಬ್ಬೊಬ್ಬರಿಗೂ ಕೊಡ್ತೀವಿ ನೋಡಿ (ಒಕ್ಕೊಕ್ಕರಿನಿ ಕೊಡ್ತಾಮ್ ಚೂಡು)’ ಎಂದು ಸಮಂತಾ ಮಾಸ್ ಶೈಲಿಯಲ್ಲಿ ಡೈಲಾಗ್ ಹೇಳಿದ್ದಾರೆ. ತಕ್ಷಣವೇ ನಗುತ್ತಾ, ‘ಪ್ರೀತಿಯಿಂದ ಅಪ್ಪಾ’ಎಂದು ಹೇಳುವ ಮೂಲಕ ಅಲ್ಲಿದ್ದವರ ಮುಖದಲ್ಲಿ ನಗು ತರಿಸಿದ್ದಾರೆ. (Source: Maa Inti Bangaram Team)

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published on: Jun 16, 2026 10:48 AM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More