21ನೇ ವಯಸ್ಸಿಗೆ ಹಣ್ಣಣ್ಣು ಅಜ್ಜಿಯ ಪಾತ್ರ ಮಾಡಿದ್ದ ಉಮಾಶ್ರೀ; ‘ಒಡಲಾಳ’ ನಾಟಕದ ನೆನಪು
ನಟಿ ಉಮಾಶ್ರೀ ಅವರು ಎಂಥ ಅದ್ಭುತ ನಟಿ ಎಂಬುದು ಸಾಬೀತಾಗಿದೆ. ಅವರು ಈಗ ಪೋಷಕ ಪಾತ್ರಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈಗ ಅವರ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ಅವರು ಹಳೆಯ ಘಟನೆ ಬಗ್ಗೆ ನೆನಪಿಸಿಕೊಂಡಿದ್ದಾರೆ .
ಜೀ ಕನ್ನಡದಲ್ಲಿ ‘ಮಹಾನಟಿ ಸೀಸನ್ 2’ ಬರುತ್ತಿದೆ. ಈ ಬಾರಿ ವೇದಿಕೆಗೆ ವಿಶೇಷ ಅತಿಥಿಯಾಗಿ ಉಮಾಶ್ರೀ ಅವರನ್ನು ಕರೆಸಲಾಗಿದೆ. ಉಮಾಶ್ರೀ ಸಿನಿಮಾಗಳು ಹಾಗೂ ನಾಟಕಗಳ ದೃಶ್ಯಗಳನ್ನು ಸ್ಪರ್ಧಿಗಳು ನಟಿಸಿ ತೋರಿಸುತ್ತಿದ್ದಾರೆ. ಈ ವೇಳೆ ಉಮಾಶ್ರೀ ಅವರು 21ನೇ ವಯಸ್ಸಿಗೆ ನಟಿಸಿದ ‘ಒಡಲಾಳ’ ನಾಟಕವನ್ನು ನೆನಪಿಸಿಕೊಳ್ಳಲಾಯಿತು. ಸೌಗಂಧಿಕ ಅವರು ಉಮಾಶ್ರೀ (Umashree) ಮಾಡಿದ್ದ ಪಾತ್ರವನ್ನು ನಟಿಸಿ ತೋರಿಸಿದರು. ಉಮಾಶ್ರೀ ಕೂಡ ನಾಟಕದ ಡೈಲಾಗ್ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

