Alok Kumar: ಅಪಘಾತಗಳು ಹೆಚ್ಚುತ್ತಿರುವ ಬೆಂಗಳೂರು-ಮೈಸೂರು ಹೆದ್ದಾರಿಯ ಬಾಬಾಸಾಹೇಬ ಪಾಳ್ಯ ಭಾಗವನ್ನು ಪರಿಶೀಲಿಸಿದ ಎಡಿಜಿಪಿ ಅಲೋಕ್ ಕುಮಾರ್

|

Updated on: Jun 27, 2023 | 8:27 PM

ಪೆನ್ಸಿಂಗ್ ನಿಂದ ಹೆಚ್ಚು ಸಮಸ್ಯೆಗಳು ಉದ್ಭವಿಸುತ್ತಿವೆ ಅಂತ ಯುವತಿ ಹೇಳಿದಾಗ ಅಲೋಕ್ ಕುಮಾರ್ ಯುವತಿಯ ವಾದವನ್ನು ಸಾರಾಸಗಟು ತಿರಸ್ಕರಿಸಿ ಅಲ್ಲಿಂದ ಹೊರಟರು.

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯನ್ನು (Bengaluru-Mysuru Highway) ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಅಂತ ಸಾರ್ವಜನಿಕರು ಪದೇಪದೆ ದೂರುತ್ತಿದ್ದಾರೆ. ಹೆದ್ದಾರಿಯ ಬೆಂಗಳೂರು ದಕ್ಷಿಣ ತಾಲ್ಲೂಕಿನ ಬಾಬಾಸಾಹೇಬಪಾಳ್ಯ ಭಾಗದಲ್ಲಿ ಸಂಭವಿಸುವ ಅಪಘಾತಗಳ ಸಂಖ್ಯೆಯೂ ಚಿಂತಾಜನಕವಾಗಿ ಹೆಚ್ಚುತ್ತಿರುವುದರಿಂದ ಸಂಚಾರ ಮತ್ತು ರಸ್ತೆ ಸುರಕ್ಷೆ ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ಅವರು ಐಜಿಪಿ ಡಾ ಬಿಆರ್ ರವಿಕಾಂತೇ ಗೌಡ (IGP Dr BR Ravikanthe Gowda) ಮತ್ತು ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಕಾರ್ತೀಕ್ ರೆಡ್ಡಿ ಜೊತೆ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಯುವತಿಯೊಬ್ಬರು ವಾಹನ ಸವಾರರು ಅನುಭವಿಸುತ್ತಿರುವ ತೊಂದರೆ ಮತ್ತು ಸಮಸ್ಯೆಗಳನ್ನು ಅಧಿಕಾರಿಗಳಿಗೆ ವಿವರಿಸಿದರು. ರಸ್ತೆಗುಂಟ ನಿರ್ಮಿಸಿರುವ ಪೆನ್ಸಿಂಗ್ ನಿಂದ ಹೆಚ್ಚು ಸಮಸ್ಯೆಗಳು ಉದ್ಭವಿಸುತ್ತಿವೆ ಅಂತ ಯುವತಿ ಹೇಳಿದಾಗ ಅಲೋಕ್ ಕುಮಾರ್ ಯುವತಿಯ ವಾದವನ್ನು ಸಾರಾಸಗಟು ತಿರಸ್ಕರಿಸಿ ಅಲ್ಲಿಂದ ಹೊರಟರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ