Mysuru: ಕೆಂಪೇಗೌಡ ಜಯಂತ್ಯುತ್ಸವ ಮೆರವಣಿಗೆಯಲ್ಲಿ ಕುಣಿದು ಸಂಭ್ರಮಿಸಿದ್ದು ಪಾಲಿಕೆಯ ಎಲ್ಲ ಪಕ್ಷಗಳ ಮಹಿಳಾ ಕಾರ್ಪೊರೇಟರ್ ಗಳು!

Mysuru: ಕೆಂಪೇಗೌಡ ಜಯಂತ್ಯುತ್ಸವ ಮೆರವಣಿಗೆಯಲ್ಲಿ ಕುಣಿದು ಸಂಭ್ರಮಿಸಿದ್ದು ಪಾಲಿಕೆಯ ಎಲ್ಲ ಪಕ್ಷಗಳ ಮಹಿಳಾ ಕಾರ್ಪೊರೇಟರ್ ಗಳು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 27, 2023 | 6:50 PM

ಕೆಂಪೇಗೌಡ ಕಟ್ಟಿದ ಬೆಂಗಳೂರಲ್ಲಿ ಎಲ್ಲ ಸಮುದಾಯದ ಜನರಿದ್ದರು ಅವರೆಲ್ಲ ನಗರದ ನಿರ್ಮಾತೃವನ್ನು ಗೌರವಿಸುತ್ತಾರೆ.

ಮೈಸೂರು: ನಗರದ ಮುಖ್ಯರಸ್ತೆಯಲ್ಲಿ ಹೀಗೆ ಕುಣಿಯುತ್ತಿರುವ ಮಹಿಳೆಯರು ಸಾಮಾನ್ಯರೇನೂ ಅಲ್ಲ, ಮೈಸೂರು ನಗರಪಾಲಿಕೆಯ ಹಾಲಿ ಮತ್ತು ಮಾಜಿ ಸದಸ್ಯೆಯರು (female corporators). ಅವರು ಕುಣಿಯುತ್ತಿರುವ ಕಾರಣವನ್ನು ನೀವು ಊಹಿಸಿರಬಹುದು. ಹೌದು ಮಾರಾಯ್ರೇ, ರಾಜ್ಯದ ಉಳಿದ ಭಾಗಗಳಲ್ಲಂತೆ ಸಾಂಸ್ಕೃತಿಕ ನಗರಿಯಲ್ಲೂ (cultural city) ಕೆಂಪೇಗೌಡರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ (procession) ಕೂಡ ನಡೆಯಿತು. ಈ ಮೆರವಣಿಗೆಯಲ್ಲೇ ನಗರಪಾಲಿಕೆಯ ಮಾಜಿ ಮತ್ತು ಹಾಲಿ ಸದಸ್ಯೆಯರು ಬ್ಯಾಂಡ್ ಸದ್ದಿಗೆ ಹೆಜ್ಚೆ ಹಾಕಿದರು. ಒಂದು ಸಂಗತಿಯನ್ನು ಗಮನಿಸಬೇಕಿದೆ, ಇಲ್ಲಿ ಕುಣಿಯುತ್ತಿರುವ ಮಹಿಳೆಯರು ಕೇವಲ ಒಂದು ಪಕ್ಷದವರಲ್ಲ, ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಸದಸ್ಯೆಯರು ಖುಷಿಯಿಂದ ತಾಳಬದ್ಧವಾಗಿ ಸ್ಟೆಪ್ಸ್ ಹಾಕಿದರು. ಮುಖ್ಯಮಂತ್ರಿ  ಸಿದ್ದರಾಮಯ್ಯ ಹೇಳಿದಂತೆ ಕೆಂಪೇಗೌಡರು ಕೇವಲ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ, ಅವರು ಕಟ್ಟಿದ ಬೆಂಗಳೂರಲ್ಲಿ ಎಲ್ಲ ಸಮುದಾಯದ ಜನರಿದ್ದರು ಅವರೆಲ್ಲ ನಗರದ ನಿರ್ಮಾತೃವನ್ನು ಗೌರವಿಸುತ್ತಾರೆ. ನಾಡಪ್ರಭು ಅಂತ ಅವರಿಗೆ ಹೆಸರು ಬಂದಿದ್ದು ಸುಮ್ಮನೆ ಅಲ್ಲ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ