DK Shivakumar; ನಮ್ಮ ಸರ್ಕಾರ ಪ್ರತಿಮೆಗಳಿಗೆ ಆದ್ಯತೆಯನ್ನೀಯದೆ ಪ್ರಗತಿ ಕಡೆ ಹೆಚ್ಚು ಗಮನ ಹರಿಸುತ್ತದೆ: ಡಿಕೆ ಶಿವಕುಮಾರ್, ಉಪ ಮುಖ್ಯಮಂತ್ರಿ
ಮೇಕೆದಾಟು ಯೋಜನೆಗಾಗಿ ಬಸವರಾಜ ಬೊಮ್ಮಾಯಿ ರೂ. 1,000 ಕೋಟಿ ತೆಗೆದಿಟ್ಟರಾದರೂ ಅದನ್ನು ಅನುಷ್ಠಾನಗೊಳಿಸುವುದು ಸಾಧ್ಯವಾಗಲಿಲ್ಲ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಬೆಂಗಳೂರು: ನಗರದಲ್ಲಿಂದು ಕೆಂಪೇಗೌಡ ಜಯಂತಿ (Kempegowda Jayanti) ಪ್ರಯುಕ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ಕೆಂಪೇಗೌಡರ ಆದರ್ಶ, ಚಿಂತನೆ, ಆರ್ಥಿಕತೆ ಬಗ್ಗೆ ಅವರ ದೂರದರ್ಶಿತ್ವ ಇವತ್ತಿಗೂ ಪ್ರಸ್ತುತ ಮತ್ತು ಅವುಗಳ ಆಧಾರದ ಮೇಲೆ ನಾವು ಅಭಿವೃದ್ಧಿ ಕಾರ್ಯಗಳನ್ನು ರೂಪಿಸುತ್ತ ಅಧಿಕಾರ ನಡೆಸಬೇಕಿದೆ ಎಂದು ಹೇಳಿದರು. ಮೇಕೆದಾಟು ಯೋಜನೆ ಬಗ್ಗೆ ಮಾತಾಡಿದ ಶಿವಕುಮಾರ್, 680 ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರಕ್ಕೆ ಹೋಗಿಬೀಳುತ್ತಿದೆ ಆ ನೀರನ್ನು ಸದುಪಯೋಗ ಮಾಡಿಕೊಳ್ಳಲು ನಾವು ಹೋರಾಟ ನಡೆಸಿದ್ದೇವೆ ಎಂದು ಹೇಳಿದರು. ಯೋಜನೆಗಾಗಿ ಬಸವರಾಜ ಬೊಮ್ಮಾಯಿ (Basavaraj Bommai) ರೂ. 1,000 ಕೋಟಿ ತೆಗೆದಿಟ್ಟರಾದರೂ ಯೋಜನೆಯನ್ನು ಅನುಷ್ಠಾನಗೊಳಿಸುವುದು ಸಾಧ್ಯವಾಗಲಿಲ್ಲ ಎಂದು ಉಪ ಮುಖ್ಯಮಂತ್ರಿ ಹೇಳಿದರು. ಕಾಂಗ್ರೆಸ್ ಸರ್ಕಾರ ಪ್ರತಿಮೆಗಳ ಕುರಿತು ಯೋಚನೆ ಮಾಡದೆ ಪ್ರಗತಿಯ ಕಡೆ ಗಮನ ಹರಿಸುತ್ತದೆ ಎಂದು ಅವರು ನಯವಾಗೇ ಬಿಜೆಪಿ ನೀತಿಯನ್ನು ಖಂಡಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ