MP Renukacharya: ಕಾಂಗ್ರೆಸ್ ನೀತಿಯನ್ನು ಹೊಗಳಿ ತಮ್ಮ ಪಕ್ಷದ ನೀತಿಯನ್ನು ಖಂಡಿಸಿದ ಎಂಪಿ ರೇಣುಕಾಚಾರ್ಯ
ಘಟಿಸಿದ ಪ್ರಮಾದಗಳನ್ನು ಇನ್ನಾದರೂ ತಿದ್ದಿಕೊಳ್ಳೋಣ ಅಂತ ರೇಣುಕಾಚಾರ್ಯ ಪಕ್ಷದ ನಾಯಕರನ್ನು ಆಗ್ರಹಿಸಿದರು.
ದಾವಣಗೆರೆ: ಜಿಲ್ಲೆಯ ಹೊನ್ನಾಳಿಯಲ್ಲಿ ಇಂದು ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಬಿಜೆಪಿ ನಾಯಕ ಎಂ ಪಿ ರೇಣುಕಾಚಾರ್ಯ (MP Renukacharya) ಕಾಂಗ್ರೆಸ್ ಪಕ್ಷದ ನೀತಿಯನ್ನು ಹೊಗಳಿ ತಮ್ಮ ಪಕ್ಷದ ನೀತಿಯನ್ನು ತೆಗಳಿದರು. ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ಅವರು ಸಂಪುಟ ರಚನೆಯಾದ ಕೂಡಲೇ ಎಲ್ಲ 34 ಸಚಿವ ಸ್ಥಾನಗಳನ್ನು ಭರ್ತಿಮಾಡಿದರು. ಆದರೆ, ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ 6 ಸ್ಥಾನಗಳನ್ನು ಖಾಲಿ ಇಡಲಾಗಿತ್ತು ಮತ್ತು ಚುನಾವಣೆಯಲ್ಲಿ ಪಕ್ಷದ ಹಿನ್ನಡೆ ಈ ಅಂಶ ಕೂಡ ಕಾರಣವಾಯಿತು ಎಂದು ರೇಣುಕಾಚಾರ್ಯ ಹೇಳಿದರು. ಪಕ್ಷದ ರಾಜ್ಯಾಧ್ಯಕ್ಷನಾಗುವ ಸಾಮರ್ಥ್ಯ ತನಗೂ ಇದೆ, ರಾಜ್ಯದ ಉದ್ದಗಲಕ್ಕೆ ಓಡಾಡಿ ಪಕ್ಷವನ್ನು ಸಂಘಟಿಸುವುದಾಗಿ ಹೇಳಿದರು. ಆದ ಪ್ರಮಾದಗಳನ್ನು ಇನ್ನಾದರೂ ತಿದ್ದಿಕೊಳ್ಳೋಣ ಅಂತ ಅವರು ಪಕ್ಷದ ನಾಯಕರನ್ನು ಆಗ್ರಹಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos