‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?

|

Updated on: Jan 10, 2025 | 8:07 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸೆಲೆಬ್ರಿಟಿಗಳು ಫಿನಾಲೆ ಹಂತ ತಲುಪೋದರಲ್ಲಿ ಇದ್ದಾರೆ. ಈಗ ಬಿಗ್ ಬಾಸ್ ಫಿನಾಲೆ ಟಿಕೆಟ್ ನೀಡೋಕೆ ವಿಶೇಷ ಅತಿಥಿಗಳ ಆಗಮನ ಆಗಿದೆ. ಹಾಗಾದರೆ ಯಾರು ಅವರು? ಅವರು ಬಂದು ಟಿಕೆಟ್ ಕೊಟ್ಟಿದ್ದು ಯಾರಿಗೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.

‘ಟಿಕೆಟ್ ಟು ಫಿನಾಲೆ’ ಟಾಸ್ಕ್ ಆಟ ದೊಡ್ಮನೆಯಲ್ಲಿ ನಡೆದಿದೆ. ಈ ಟಾಸ್ಕ್​ ತುಂಬಾನೇ ಟಫ್ ಆಗಿತ್ತು. ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಜೋರಾಗಿದೆ. ರಜತ್, ಭವ್ಯಾ, ತ್ರಿವಿಕ್ರಂ ಹಾಗೂ ಹನುಮಂತ ಅವರು ಫಿನಾಲೆ ಟಿಕೆಟ್ ಪಡೆಯುವ ರೇಸ್​ನಲ್ಲಿ ಇದ್ದಾರೆ. ಈ ಟಾಸ್ಕ್​ನ ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಇತ್ತು. ಅದಕ್ಕೆ ಉತ್ತರ ಇನ್ನಷ್ಟೇ ಸಿಗಬೇಕಿದೆ. ಈ ಮಧ್ಯೆ ಫಿನಾಲೆ ಟಿಕೆಟ್ ನೀಡೋಕೆ ಅಧಿತಿ ಪ್ರಭುದೇವ ಹಾಗೂ ಶರಣ್ ಆಗಮಿಸಿದ್ದಾರೆ. ಅವರ ನಟನೆಯ ‘ಛೂಮಂತರ್’ ಸಿನಿಮಾ ರಿಲೀಸ್ ಆಗಿದೆ. ಅದರ ಪ್ರಚಾರಕ್ಕಾಗಿ ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.