ಸುಡು ಬಿಸಿಲಿನಲ್ಲಿ ತಲೆಮೇಲೆ ಸೂರಿಲ್ಲದ ಬಯಲಿನಲ್ಲಿ ಬದುಕುತ್ತಿರುವ ಆಫ್ಘನ್ನರಿಗೆ ಸಹಾಯ ಎಲ್ಲಿಂದ ಬರಬಹುದು ಅಂತ ಗೊತ್ತಿಲ್ಲ!

ಸುಡು ಬಿಸಿಲಿನಲ್ಲಿ ತಲೆಮೇಲೆ ಸೂರಿಲ್ಲದ ಬಯಲಿನಲ್ಲಿ ಬದುಕುತ್ತಿರುವ ಆಫ್ಘನ್ನರಿಗೆ ಸಹಾಯ ಎಲ್ಲಿಂದ ಬರಬಹುದು ಅಂತ ಗೊತ್ತಿಲ್ಲ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 25, 2021 | 7:40 PM

ತಾಲಿಬಾನಿಗಳಿಗೆ ಹೆದರಿ ಅವರು ಇಲ್ಲಿಗೆ ಬಂದಿರುವುದರಿಂದ ವಾಪಸ್ಸು ಹೋಗುವ ಪ್ರಶ್ನೆ ಉದ್ಭವಿಸುವುದಿಲ್ಲ. ಹಾಗಾದರೆ ಮುಂದಿನ ಬದುಕು ಹೇಗೆ? ಒಂದು ಚುನಾಯಿತ ಸರ್ಕಾರವಾದರೆ ಅವರಿಗೆ ಪುನರ್ವಸತಿ ಕಲ್ಪಿಸುವ ಮತ್ತು ಅಹಾರ ತಲುಪಿಸುವ ವ್ಯವಸ್ಥೆ ಮಾಡುತಿತ್ತು.

ಇಲ್ಲಿರುವ ವಿಡಿಯೋವನ್ನು ನೋಡುತ್ತಿದ್ದರೆ ಕರುಳು ಕಿತ್ತುಬಂದಂತಾಗುತ್ತದೆ. ತಾಲಿಬಾನಿಗಳಂ ಕ್ರೌರ್ಯ ಮತ್ತು ದೌರ್ಜನ್ಯಕ್ಕೆ ಹೆದರಿ ಒಂದು ವಿಶಾಲವಾದ ಬಯಲು ಪ್ರದೇಶದಲ್ಲಿ ನೆತ್ತಿ ಮೇಲೆ ಸೂರಿಲ್ಲದೆ ಆಶ್ರಯ ಪಡೆದಿರುವ ಆಫ್ಘನ್ನರು ಇವರು. ಈ ಜನರಲ್ಲಿ ಮಹಿಳೆಯರಿದ್ದಾರೆ ಮತ್ತು ಚಿಕ್ಕ ಪುಟ್ಟ ಮಕ್ಕಳೂ ಇವೆ. ಇವರೆಲ್ಲರಿಗೆ ಮುಂದಿನ ಊಟ ಎಲ್ಲಿಂದ ಸಿಕ್ಕೀತು, ಕುಡಿಯುವ ನೀರಿಗೆ ಏನು ಮಾಡುವುದು ಅಂತ ಯಾವುದೇ ಸುಳಿವಿಲ್ಲ. ಮಳೆ ಸುರಿಯಲಾರಂಭಿಸಿದರೆ ಆಶ್ರಯ ಪಡೆಯಲು ಅವರಿಗೆ ಸೂರು ಬಿಡಿ, ಗಿಡ-ಮರಗಳೂ ಇಲ್ಲ. ನರಕ ಸದೃಶ ಬದುಕು ಇದು.

ತಾಲಿಬಾನಿಗಳಿಗೆ ಹೆದರಿ ಅವರು ಇಲ್ಲಿಗೆ ಬಂದಿರುವುದರಿಂದ ವಾಪಸ್ಸು ಹೋಗುವ ಪ್ರಶ್ನೆ ಉದ್ಭವಿಸುವುದಿಲ್ಲ. ಹಾಗಾದರೆ ಮುಂದಿನ ಬದುಕು ಹೇಗೆ? ಒಂದು ಚುನಾಯಿತ ಸರ್ಕಾರವಾದರೆ ಅವರಿಗೆ ಪುನರ್ವಸತಿ ಕಲ್ಪಿಸುವ ಮತ್ತು ಅಹಾರ ತಲುಪಿಸುವ ವ್ಯವಸ್ಥೆ ಮಾಡುತಿತ್ತು. ಆದರೆ ತಾಲಿಬಾನಿಗಳು ಮಾನವೀಯತೆ ಇಲ್ಲದ ರಾಕ್ಷಸರು. ಹೆಣ್ಣುಮಕ್ಕಳನ್ನೂ ಗುಂಡಿಟ್ಟು ಕೊಲ್ಲುವ, ಅಪ್ರಾಪ್ತ ಬಾಲಕಿಯರನ್ನು ತಮ್ಮ ಕಾಮತೃಷೆ ತೀರಿಸಿಕೊಳ್ಳಲು ಬಳಸುವ ನಿರ್ದಯಿಗಳು ಹಾಗೂ ಕಾಮಾಂಧರು. ಮನೆ ಬಾಲ್ಕನಿಯಲ್ಲಿ ಅಥವಾ ಮಾಳಿಗೆಯ ಮೇಲೆ ಮಹಿಳೆ ಕಂಡರೆ ಮನೆಹೊಕ್ಕು ಆಕೆಯನ್ನು ಕೊಲ್ಲುವ ದುಷ್ಟ ಕ್ರೂರಿಗಳಿಂದ ಈ ಜನ ಏನು ತಾನೆ ನಿರೀಕ್ಷಿಸುವುದು ಸಾಧ್ಯ?

ವಿಶ್ವಸಂಸ್ಥೆ ಮತ್ತು ಮಾನವ ಹಕ್ಕುಗಳಿಗಾಗಿ ಹೋರಾಡುವ ಸಂಸ್ಥೆಗಳಿಗೆ ಈ ದೃಶ್ಯಗಳು ಕಣ್ಣಿಗೆ ಬೀಳುತ್ತಿಲ್ಲವೇ? ಇಲ್ಲಿರುವ ಮಹಿಳೆಯರು, ಬಾಲಕಿಯರು ಬಹಿರ್ದೆಶೆ ತೀರಿಸಿಕೊಳ್ಳಲು ಎಲ್ಲಿಗೆ ಹೋಗಬೇಕು? ತಲೆ ಮೇಲೆ ಸೂರಿಲ್ಲದ ಕಾರಣ ಮಹಿಳೆಯರು ಮತ್ತು ಮಕ್ಕಳು ಅತಿಸಾರದ ತೊಂದರೆಗೀಡಾದರೆ ಅವರ ಪಡಬಹುದಾದ ಸ್ಥಿತಿಯನ್ನು ಒಮ್ಮೆ ಯೋಚಿಸಿ ನೋಡಿ.

ಅಫಘಾನಿಸ್ತಾನದ ಜನರಂತೆ ಮಾನವೀಯತೆ ಉಳ್ಳವರೆಲ್ಲ ತಾಲಿಬಾನಿಗಳನ್ನು ಶಪಿಸುತ್ತಿರುವುದರಲ್ಲಿ ತಪ್ಪಿದೆಯೇ? ಖಂಡಿತ ಇಲ್ಲ.

ಇದನ್ನೂ ಓದಿ:  ಚೆಂದುಳ್ಳಿ ಚೆಲುವೆ ಅನನ್ಯಾ ಪಾಂಡೆಗೆ ಕಪ್ಪು ಉಡುಗೆ ಅಂದರೆ ಬಹಳ ಇಷ್ಟವಂತೆ, ವಿಡಿಯೋ ನೋಡಿದರೆ ನಿಮಗೂ ಗೊತ್ತಾಗುತ್ತದೆ!