ರಾಜಕಾರಣದ ಜಂಜಡಗಳಿಂದ ಬಸವಳಿದಿರುವ ಡಿಕೆ ಶಿವಕುಮಾರ್ ದುಬೈಗೆ ಹೋಗಿ ಕೆಮೆರಾಗೆ ಪೋಸ್ ನೀಡಿದರು!
ದುಬೈ ನಗರದಲ್ಲಿರುವ ಮ್ಯೂಸಿಯಂ ಆಫ್ ಫ್ಯೂಚರ್ ಮುಂದೆ ಅವರು ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಅವರೊಂದಿಗೆ ಪೋಸ್ ನೀಡಿದ್ದಾರೆ.
ಮೇಕೆದಾಟು ಯೋಜನೆ ಅನುಷ್ಠಾನ ಒತ್ತಾಯಿಸಿ ಪಾದಯಾತ್ರೆ, ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ಕರ್ನಾಟಕ ಲೆಗ್ ನಲ್ಲಿ ಹಲವಾರು ಕಿಲೋಮೀಟರ್ ಗಳಷ್ಟು ನಡಿಗೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿಯಾಗುವ ಅವಕಾಶಕ್ಕೆ ಅಡ್ಡಿಯಾಗಿರುವ ಸಿದ್ದರಾಮಮಯ್ಯ (Siddaramaiah) ಮತ್ತು ಅವರ ಬೆಂಬಲಿಗರು-ಹೀಗೆ ದೈಹಿಕ ಮತ್ತು ಮಾನಸಿಕವಾಗಿ ಬಳಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ದಣಿವಾರಿಸಿಕೊಳ್ಳಲು ಮತ್ತು ರಾಜಕಾರಣ ಜಂಜಡಗಳಿಂದ ಅಲ್ಪಾವಧಿಗೆ ದೂರವಾಗಲು ದುಬೈ ಪ್ರವಾಸ ತೆರಳಿದ್ದಾರೆ. ಅಲ್ಲಿ ಅವರು ಎಷ್ಟು ಗೆಲುವಾಗಿದ್ದಾರೆ, ನಿರಾತಂಕದಿಂದ ಪ್ರವಾಸವನ್ನು ಆನಂದಿಸುತ್ತಿದ್ದಾರೆ ಅನ್ನೋದಕ್ಕೆ ಈ ಫೋಟೋಗಳು ಸಾಕ್ಷಿ. ದುಬೈ ನಗರದಲ್ಲಿರುವ ಮ್ಯೂಸಿಯಂ ಆಫ್ ಫ್ಯೂಚರ್ ಮುಂದೆ ಅವರು ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಅವರೊಂದಿಗೆ ಪೋಸ್ ನೀಡಿದ್ದಾರೆ. ಅಲ್ಲಿಂದ ವಾಪಸ್ಸಾದ ಬಳಿಕ ಅವರು ಕರ್ನಾಟಕ ಬಸ್ ಯಾತ್ರೆ ಆರಂಭಿಸಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ