ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ತನ್ನ ಪುಟ್ಟಮರಿಗೆ ರಸ್ತೆ ದಾಟುವುದನ್ನು ಹೇಳಿಕೊಟ್ಟ ಅಮ್ಮಹುಲಿ ‘ಸುಂದರಿ’!

ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ತನ್ನ ಪುಟ್ಟಮರಿಗೆ ರಸ್ತೆ ದಾಟುವುದನ್ನು ಹೇಳಿಕೊಟ್ಟ ಅಮ್ಮಹುಲಿ ‘ಸುಂದರಿ’!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 07, 2022 | 12:33 PM

ಕಾಡುರಸ್ತೆಯಲ್ಲಿ ನೀವು ನೋಡುವ ಹಾಗೆ ಟ್ರಾಫಿಕ್ ಸಮಸ್ಯೆಯೇನೂ ಇಲ್ಲ, ಆದರೂ ಅಮ್ಮಹುಲಿ ತನ್ನ ಕಂದನಿಗೆ ರಸ್ತೆ ಹೇಗೆ ದಾಟಬೇಕು ಅಂತ ಹೇಳಿಕೊಡುತ್ತಿದೆ!

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಮತ್ತು ರಾಷ್ಟ್ರೀಯ ಉದ್ಯಾನವನಕ್ಕೆ (Bandipur National Park) ಸಫಾರಿಗೆಂದು ಹೋದವರಿಗೆ ಹುಲಿಗಳ (tiger) ದರ್ಶನವಾಗೋದು ಸಾಮಾನ್ಯವಾಗಿಬಿಟ್ಟಿದೆ. ಬುಧವಾರ ಪ್ರವಾಸಕ್ಕೆ ತೆರಳಿದವರಿಗೆ ತಾಯಿಹುಲಿ ಮತ್ತು ಅದರ ಪುಟ್ಟಮರಿ (cub) ಕಾಡುರಸ್ತೆಯಲ್ಲಿ ನಡೆದುಹೋಗುವ ದೃಶ್ಯ ಅವರ ಕೆಮೆರಾಗಳಿಗೆ ಸೆರೆಸಿಕ್ಕಿದೆ. ಪ್ರವಾಸಿಗರೇ ಈ ಹುಲಿಗೆ ‘ಸುಂದರಿ’ ಅಂತ ಹೆಸರಿಟ್ಟಿದ್ದಾರೆ. ಕಾಡುರಸ್ತೆಯಲ್ಲಿ ನೀವು ನೋಡುವ ಹಾಗೆ ಟ್ರಾಫಿಕ್ ಸಮಸ್ಯೆಯೇನೂ ಇಲ್ಲ, ಆದರೂ ಅಮ್ಮಹುಲಿ ತನ್ನ ಕಂದನಿಗೆ ರಸ್ತೆ ಹೇಗೆ ದಾಟಬೇಕು ಅಂತ ಹೇಳಿಕೊಡುತ್ತಿದೆ!

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ