ಸುಟ್ಟಗಾಯಗಳಿಂದ ನರಳುತ್ತಿದ್ದ ಮಗುವೊಂದನ್ನು ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ ಮುಳುಬಾಗಿಲು ಸಬ್-ಇನ್ಸ್​ಪೆಕ್ಟರ್​ಗೆ ನೆಟ್ಟಿಗರಿಂದ ಶ್ಲಾಘನೆ!

ಸುಟ್ಟಗಾಯಗಳಿಂದ ನರಳುತ್ತಿದ್ದ ಮಗುವೊಂದನ್ನು ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ ಮುಳುಬಾಗಿಲು ಸಬ್-ಇನ್ಸ್​ಪೆಕ್ಟರ್​ಗೆ ನೆಟ್ಟಿಗರಿಂದ ಶ್ಲಾಘನೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 07, 2022 | 1:55 PM

ಈ ವಿಡಿಯೋ ವೈರಲ್ ಅಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಮಂಜುನಾಥ ಅವರ ಕೆಲಸವನ್ನು ಮುಕ್ತವಾಗಿ ಕೊಂಡಾಡಲಾಗುತ್ತಿದೆ.

ಕೋಲಾರ: ಕಳ್ಳರನ್ನು ಹಿಡಿಯುವುದು, ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳುವುದರ ಜೊತೆಗೆ ಕಷ್ಟದಲ್ಲಿರುವರಿಗೆ ನೆರವಾಗುವ ಕೆಲಸವನ್ನೂ ಪೊಲೀಸರು ಮಾಡುತ್ತ್ತಾರೆ ಅನ್ನೋದನ್ನು ಮುಳಬಾಗಿಲು ಪೊಲೀಸ್ ಠಾಣೆಯ (Mulbagal police station) ಸಬ್ ಇನ್ಸ್ ಪೆಕ್ಟರ್ ಮಂಜುನಾಥ (Manjunath) ವೈಯಕ್ತಿಕ ಉದಾಹರಣೆಯೊಂದಿಗೆ ತೋರಿಸಿಕೊಟ್ಟಿದ್ದಾರೆ. ಬೆಂಕಿ ಆಕಸ್ಮಿಕವೊಂದರಲ್ಲಿ (fire mishap) ಸಿಕ್ಕು ಮೈಯೆಲ್ಲ ಸುಟ್ಟಿದ್ದ ಮಗುವೊಂದನ್ನು ಮಂಜುನಾಥ ಎತ್ತಿಕೊಂಡು ಮುಳಬಾಗಿಲು ತಾಲ್ಲೂಕು ಆಸ್ಪತ್ರೆಯ ಕಡೆ ಧಾವಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ ವೈರಲ್ ಅಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಮಂಜುನಾಥ ಅವರ ಕೆಲಸವನ್ನು ಮುಕ್ತವಾಗಿ ಕೊಂಡಾಡಲಾಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ