ಹಾಸನ: ಬೇಲೂರು ಕ್ಷೇತ್ರದ ಟಿಕೆಟ್ ಗಾಗಿ ಕಾಂಗ್ರೆಸ್ ನಾಯಕರ ನಡುವೆ ಕಿತ್ತಾಟ, ಹಲ್ಲೆ; ಪೊಲೀಸರಿಗೆ ದೂರು
ಭಾಗದ ಹಿರಿಯ ಮುಖಂಡ ರಾಯಪುರ ಶಿವಣ್ಣ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರನ್ನು ನೀಡಿದ್ದಾರೆ
ಹಾಸನ: ಬಿಜೆಪಿ ರೌಡಿ ಶೀಟರ್ ಮತ್ತು ಕೊಲೆಗಡುಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ (Congress) ನಾಯಕರು ತಮ್ಮ ಪಕ್ಷದ ಎರಡನೇ ಪಂಕ್ತಿಯ ನಾಯಕರು ಏನೇನೆಲ್ಲ ಮಾಡುತ್ತಿದ್ದಾರೆ ಅಂತ ಗಮನಿಸಬೇಕು ಮಾರಾಯ್ರೇ. ಬೇಲೂರು (Belur) ವಿಧಾನಸಭೆ ಮತಕ್ಷೇತ್ರದ ಟಿಕೆಟ್ ಗಾಗಿ ಕಾಂಗ್ರೆಸ್ ನಾಯಕರ ನಡುವೆ ಕಲಹ ಶುರುವಾಗಿದೆ. ಭಾಗದ ಹಿರಿಯ ಮುಖಂಡ ರಾಯಪುರ ಶಿವಣ್ಣ (Rayapur Shivanna) ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರನ್ನು ನೀಡಿ ಅದೇ ಸಂಗತಿಯನ್ನು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಈ ಕಲಹದಲ್ಲಿ ಸಿದ್ದರಾಮಯ್ಯನವರ ನಿಂದನೆಯೂ ನಡೆದಿದೆ!
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos