ಬಿಗ್ ಬಾಸ್ ಲಾಂಚ್​ಗೆ ಭರ್ಜರಿ ಟಿಆರ್​ಪಿ; ಹೇಗಿತ್ತು ನೋಡಿ ಸೆಲೆಬ್ರೇಷನ್

|

Updated on: Oct 12, 2024 | 8:26 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ ಸೆಪ್ಟೆಂಬರ್ 29ರಂದು ಆರಂಭ ಆಯಿತು. ಸುದೀಪ್ ನಿರೂಪಣೆ, ಸ್ಪರ್ಧಿಗಳ ವಿವರಣೆ ನೋಡಲು ಫ್ಯಾನ್ಸ್ ಕಾದಿದ್ದರು. ಈ ಕಾರಣಕ್ಕೆ ಬಿಗ್​​ ಬಾಸ್​ಗೆ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಈ ಶೋನ ಟಿಆರ್​ಪಿ ಕೂಡ ಮೆಚ್ಚುಗೆ ಪಡೆದಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಗ್ರ್ಯಾಂಡ್ ಲಾಂಚ್​ಗೆ ಒಳ್ಳೆಯ ಟಿಆರ್​ಪಿ ಸಿಕ್ಕಿದೆ. 9.9 ಟಿವಿಆರ್ ಸಿಕ್ಕಿದ್ದು ಕಲರ್ಸ್ ವಾಹಿನಿ ಈ ವಿಚಾರವನ್ನು ಇತ್ತೀಚಿಗೆ ರಿವೀಲ್ ಮಾಡಿತ್ತು. ಈಗ ಇದನ್ನು ಕಲರ್ಸ್ ಕನ್ನಡ ಸಂಭ್ರಮಿಸಿದೆ. ಕಿಚ್ಚ ಸುದೀಪ್ ಅವರು ಬಿಗ್ ಬಾಸ್​ ಸೆಟ್​ಗೆ ಬಂದ ಬಳಿಕ ಕೇಕ್ ಕತ್ತರಿಸಲಾಗಿದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Oct 12, 2024 08:25 AM