ದೇವಸ್ಥಾನದಲ್ಲಿ ದರ್ಶನದ ಬಳಿಕ ನೇರವಾಗಿ ಮನೆಗೆ ಹೋಗಿ; ಯಾಕೆ ಗೊತ್ತಾ?
ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ನೇರವಾಗಿ ಮನೆಗೆ ಹೋಗಬೇಕಾ? ಬೇಡವಾ ಎಂಬಂತಹ ಗೊಂದಲ ಪ್ರತಿಯೊಬ್ಬರಲ್ಲಿ ಕಾಡುತ್ತದೆ. ಆದರೆ, ಶಾಸ್ತ್ರದ ಪ್ರಕಾರ ನಾವು ದೇವಸ್ಥಾನಕ್ಕೆ ಹೋದಾಗ ನೇರವಾಗಿ ನಮ್ಮ ಮನೆಗೆ ಬರಬೇಕು ಎಂದು ಹೇಳುತ್ತದೆ. ಇದಕ್ಕೆ ಕಾರಣವನ್ನ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಈ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.
ನಮ್ಮ ಆಚಾರ-ವಿಚಾರಗಳಲ್ಲಿ ಭಗವಂತನಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತೇವೆ. ಅದರಲ್ಲಿ ಮನೆಯಲ್ಲಿ ಮಾಡುವ ಪೂಜೆ, ಹೋಮ-ಹವನದ ಜೊತೆಗೆ ಪ್ರತಿ ಗ್ರಾಮ, ಊರುಗಳಲ್ಲಿನ ದೇವಸ್ಥಾನಗಳಿಗೆ ಹೋಗುತ್ತೇವೆ. ಈ ವೇಳೆ ಅನುಕೂಲ ಇದ್ದರೆ, ಕೈ ಕಾಲುಗಳನ್ನ ತೊಳೆದುಕೊಂಡು ಹೋಗುವಂತಹದ್ದು ಪದ್ಧತಿಯಿದೆ. ಈ ಮಧ್ಯೆ ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ನೇರವಾಗಿ ಮನೆಗೆ ಹೋಗಬೇಕಾ? ಬೇಡವಾ ಎಂಬಂತಹ ಗೊಂದಲ ಪ್ರತಿಯೊಬ್ಬರಲ್ಲಿ ಕಾಡುತ್ತದೆ. ಆದರೆ, ಶಾಸ್ತ್ರದ ಪ್ರಕಾರ ನಾವು ದೇವಸ್ಥಾನಕ್ಕೆ ಹೋದಾಗ ನೇರವಾಗಿ ನಮ್ಮ ಮನೆಗೆ ಬರಬೇಕು ಎಂದು ಹೇಳುತ್ತದೆ. ಇದಕ್ಕೆ ಕಾರಣವು ಇದೆ, ಹೌದು, ನಾವು ದೇವಸ್ಥಾನಕ್ಕೆ ಹೋಗಿದ್ದಾಗ ನಮ್ಮಲ್ಲಿನ ಋಣಾತ್ಮಕವನ್ನ ಅಲ್ಲಿನ ಮಹಾಧ್ವಾರವೇ ಹೀರಿಕೊಂಡು, ನಮ್ಮಲ್ಲಿ ಧನಾತ್ಮಕ ಶಕ್ತಿ ಆವರಿಸಿಕೊಂಡಿರುತ್ತದೆ. ಅದು ನೇರವಾಗಿ ನಮ್ಮ ಮನೆಗೆ ತೆರಳಿದಾಗ ಅದು ನಮ್ಮ ಮನೆಯನ್ನು ಕೂಡ ಆವರಿಸಿಕೊಳ್ಳುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Published on: Apr 07, 2024 07:07 AM
Latest Videos