Video: ಬಾಲಕನ ಕುತ್ತಿಗೆಗೆ ಕಚ್ಚಿದ ಬೀದಿ ನಾಯಿ, ಆತನ ಸ್ಥಿತಿ ಯಾರಿಗೂ ಬೇಡ
ಬಾಲಕನ ಕುತ್ತಿಗೆಗೆ ಬೀದಿ ನಾಯಿ ಕಚ್ಚಿದ ಪರಿಣಾಮ ಆತ ನಾಯಿಯಂತೆ ವರ್ತಿಸುತ್ತಿದ್ದ. ಬೀದಿಯಲ್ಲಿ ಮಲಗಿ ನಾಯಿಯಂತೆ ಬೊಗಳುತ್ತಿರುವ ವಿಡಿಯೋ ವೈರಲ್ ಆಗಿದೆ . ಮಧ್ಯಪ್ರದೇಶದ ರೇವಾ ಜಿಲ್ಲೆಯ ಬಹಾದಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಿತಿನ್ ನಾಥ್ ಎಂಬ 14 ವರ್ಷದ ಬಾಲಕನಿಗೆ ಬೀದಿ ನಾಯಿ ಕಚ್ಚಿತ್ತು. ಬಳಿಕ ಆತ ರೇಬಿಸ್ನಿಂದ ಸಾವನ್ನಪ್ಪಿದ್ದಾನೆ. ಜೂನ್ 16 ರಂದು, ರಾಜೇಂದ್ರ ನಗರ ಪ್ರದೇಶದಲ್ಲಿರುವ ತನ್ನ ಚಿಕ್ಕಮ್ಮನ ಮನೆಯಲ್ಲಿದ್ದಾಗ, ಬಾಲಕ ಮನೆಯ ಹೊರಗೆ ಆಟವಾಡುತ್ತಿದ್ದಾಗ ಬೀದಿ ನಾಯಿಯೊಂದು ಅವನ ಕುತ್ತಿಗೆಗೆ ಕಚ್ಚಿತ್ತು.
ರೇವಾ, ಜುಲೈ 13: ಬಾಲಕನ ಕುತ್ತಿಗೆಗೆ ಬೀದಿ ನಾಯಿ ಕಚ್ಚಿದ ಪರಿಣಾಮ ಆತ ರೇಬಿಸ್ನಿಂದ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ. ಸಾಯುವುದಕ್ಕೂ ಮುನ್ನ ಪರಿಸ್ಥಿತಿ ಹೇಗಾಗಿತ್ತು ಎನ್ನುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಬಾಲಕನ ಕುತ್ತಿಗೆಗೆ ಬೀದಿ ನಾಯಿ ಕಚ್ಚಿದ ಪರಿಣಾಮ ಆತ ನಾಯಿಯಂತೆ ವರ್ತಿಸುತ್ತಿದ್ದ. ಬೀದಿಯಲ್ಲಿ ಮಲಗಿ ನಾಯಿಯಂತೆ ಬೊಗಳುತ್ತಿರುವ ವಿಡಿಯೋ ವೈರಲ್ ಆಗಿದೆ .
ಮಧ್ಯಪ್ರದೇಶದ ರೇವಾ ಜಿಲ್ಲೆಯ ಬಹಾದಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಿತಿನ್ ನಾಥ್ ಎಂಬ 14 ವರ್ಷದ ಬಾಲಕನಿಗೆ ಬೀದಿ ನಾಯಿ ಕಚ್ಚಿತ್ತು. ಬಳಿಕ ಆತ ರೇಬಿಸ್ನಿಂದ ಸಾವನ್ನಪ್ಪಿದ್ದಾನೆ. ಜೂನ್ 16 ರಂದು, ರಾಜೇಂದ್ರ ನಗರ ಪ್ರದೇಶದಲ್ಲಿರುವ ತನ್ನ ಚಿಕ್ಕಮ್ಮನ ಮನೆಯಲ್ಲಿದ್ದಾಗ, ಬಾಲಕ ಮನೆಯ ಹೊರಗೆ ಆಟವಾಡುತ್ತಿದ್ದಾಗ ಬೀದಿ ನಾಯಿಯೊಂದು ಅವನ ಕುತ್ತಿಗೆಗೆ ಕಚ್ಚಿತ್ತು.
ಬಾಲಕನನ್ನು ಪಿಚಿಯಾ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವನಿಗೆ ಮೂರು ಡೋಸ್ ರೇಬೀಸ್ ಲಸಿಕೆ ನೀಡಲಾಯಿತು. ಜುಲೈ 14 ರಂದು ನಾಲ್ಕನೇ ಲಸಿಕೆ ನೀಡಲು ನಿರ್ಧರಿಸಲಾಗಿತ್ತು. ಆದರೆ ನಿತಿನ್ ಸ್ಥಿತಿ ದಿನೇ ದಿನೇ ಹದಗೆಡಲು ಶುರುವಾಗಿತ್ತು. ಆತ ನಾಯಿಯಂತೆ ವರ್ತಿಸುವುದು, ಬೊಗಳುವುದಕ್ಕೆ ಶುರು ಮಾಡಿದ್ದ. ರೇಬಿಸ್ ಕಾಯಿಲೆಯು ಬಾಲಕನ ಮೆದುಳಿಗೆ ತೀವ್ರ ತರದ ಪರಿಣಾಮ ಬೀರಿತ್ತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

