ಭಾರೀ ಮಳೆಯಿಂದ ಹೆಲಿಕಾಪ್ಟರ್​​ ಬದಲು ಕಾರಿನಲ್ಲೇ ಮಣಿಪುರದ ರ್ಯಾಲಿ ತಲುಪಿದ ಮೋದಿ

Updated on: Sep 13, 2025 | 4:20 PM

ಪ್ರಧಾನಿ ನರೇಂದ್ರ ಮೋದಿ ಮಣಿಪುರದ ಇಂಫಾಲ್‌ನಲ್ಲಿರುವ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಭಾರೀ ಮಳೆಯಾಗುತ್ತಿತ್ತು. ಹೆಲಿಕಾಪ್ಟರ್‌ನಲ್ಲಿ ಚುರಚಂದಪುರಕ್ಕೆ ತೆರಳಲು ಹವಾಮಾನ ಅನುಕೂಲಕರವಾಗಿರಲಿಲ್ಲ. ಭಾರೀ ಮಳೆಯ ಹೊರತಾಗಿಯೂ, ರಸ್ತೆ ಮೂಲಕ ಒಂದೂವರೆ ಗಂಟೆಗಳ ದೂರದಲ್ಲಿದ್ದರೂ, ಜನರೊಂದಿಗೆ ಸಂವಹನ ನಡೆಸಲು ಪ್ರಧಾನಿಯವರು ರಸ್ತೆ ಮೂಲಕ ಸ್ಥಳಕ್ಕೆ ತಲುಪಲು ನಿರ್ಧರಿಸಿದರು. ಭಾರೀ ಮಳೆಯಲ್ಲೂ ಪ್ರಧಾನಿ ಮೋದಿಯನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಜನರು ಕಾಯುತ್ತಾ ನಿಂತಿದ್ದರು. ಕಾರಿನಲ್ಲೇ ಮೋದಿ ರ್ಯಾಲಿ ನಡೆಯುವ ಚುರಾಚಂದ್‌ಪುರಕ್ಕೆ ತಲುಪಿದ್ದಾರೆ.

ಇಂಫಾಲ್, ಸೆಪ್ಟೆಂಬರ್ 13: ಮಣಿಪುರದಲ್ಲಿ ಭಾರೀ ಮಳೆಯಾಗುತ್ತಿದ್ದ ಕಾರಣದಿಂದ ಮಿಜೋರಾಂನಿಂದ ಚುರಾಚಂದ್‌ಪುರಕ್ಕೆ ಹೆಲಿಕಾಪ್ಟರ್‌ನಲ್ಲಿ ಹಾರುವ ಬದಲು ರಸ್ತೆಯಲ್ಲೇ ರ್ಯಾಲಿಯ ಸ್ಥಳ ತಲುಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ವಿಮಾನದಲ್ಲಿ ಇಂಫಾಲ್‌ಗೆ ಬಂದಿಳಿದು, ಒಂದೂವರೆ ಗಂಟೆಗಳ ಕಾಲ ಕಾರಿನಲ್ಲೇ ಪ್ರಯಾಣಿಸಿ ರ್ಯಾಲಿ ತಲುಪಲು ನಿರ್ಧರಿಸಿದ್ದಾರೆ. ಮಳೆ ನಿಲ್ಲುವುದನ್ನು ಕಾಯುತ್ತಾ ಕುಳಿತರೆ ತಮಗಾಗಿ ಕಾಯುತ್ತಿರುವ ಜನರನ್ನು ಭೇಟಿಯಾಗಲು ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಪ್ರಧಾನಿ ಮೋದಿ ಹೆಲಿಕಾಪ್ಟರ್ ಬದಲು ಕಾರಿನಲ್ಲೇ ಪ್ರಯಾಣಿಸಿದ್ದಾರೆ. ಭಾರೀ ಮಳೆಯಲ್ಲೂ ಪ್ರಧಾನಿ ಮೋದಿಯನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಜನರು ಕಾಯುತ್ತಾ ನಿಂತಿದ್ದರು. ಕಾರಿನಲ್ಲೇ ಮೋದಿ ರ್ಯಾಲಿ ನಡೆಯುವ ಚುರಾಚಂದ್‌ಪುರಕ್ಕೆ ತಲುಪಿದ್ದಾರೆ.

ಪ್ರಧಾನಿ ಮೋದಿ ಇಂಫಾಲ್‌ನ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ, ಭಾರೀ ಮಳೆಯಾಗುತ್ತಿತ್ತು. ಚುರಾಚಂದ್‌ಪುರಕ್ಕೆ ಹೆಲಿಕಾಪ್ಟರ್ ಪ್ರಯಾಣಕ್ಕೆ ಹವಾಮಾನ ಅನುಕೂಲಕರವಾಗಿರಲಿಲ್ಲ ಎಂದು ಹೇಳಲಾಗಿತ್ತು. ರ್ಯಾಲಿ ಸ್ಥಳವು ರಸ್ತೆಯ ಮೂಲಕ ಸುಮಾರು ಒಂದೂವರೆ ಗಂಟೆಗಳ ದೂರದಲ್ಲಿತ್ತು.
ಭಾರೀ ಮಳೆಯ ಹೊರತಾಗಿಯೂ, ಜನರೊಂದಿಗೆ ಸಂವಹನ ನಡೆಸಲು ಪ್ರಧಾನಿ ಮೋದಿ ಅವರು ಜಾಸ್ತಿ ಸಮಯ ತೆಗೆದುಕೊಂಡರೂ ರಸ್ತೆಯ ಮೂಲಕವೇ ರ್ಯಾಲಿಯ ಸ್ಥಳವನ್ನು ತಲುಪಲು ನಿರ್ಧರಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ