ಇದು ಧೈರ್ಯದ ಭೂಮಿ, ನಾನು ನಿಮ್ಮೊಂದಿಗಿದ್ದೇನೆ; 2023ರ ಹಿಂಸಾಚಾರದ ಬಳಿಕ ಮಣಿಪುರದಲ್ಲಿ ಪ್ರಧಾನಿ ಮೋದಿ ಮೊದಲ ಭಾಷಣ
2023ರ ಜನಾಂಗೀಯ ಹಿಂಸಾಚಾರದ ನಂತರ ಮಣಿಪುರಕ್ಕೆ ಮೊದಲ ಭೇಟಿ ನೀಡಿದ ಪ್ರಧಾನಿ ಮೋದಿ ಮಣಿಪುರದಲ್ಲಿ ಶಾಂತಿ ಮತ್ತು ಏಕತೆಗಾಗಿ ಮನವಿ ಮಾಡಿದರು. ಮಣಿಪುರದಲ್ಲಿ ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಲು ಸರ್ಕಾರ ಮಾಡುತ್ತಿರುವ ಪ್ರಯತ್ನಗಳನ್ನು ಮೋದಿ ಎತ್ತಿ ತೋರಿಸಿದರು. "ಮಣಿಪುರದಲ್ಲಿ ಜೀವನವನ್ನು ಮತ್ತೆ ಹಳಿಗೆ ತರಲು, ನಿರಾಶ್ರಿತ ಕುಟುಂಬಗಳಿಗೆ 7,000 ಹೊಸ ಮನೆಗಳನ್ನು ನಿರ್ಮಿಸಲು ಸಹಾಯ ಮಾಡುವುದು ಸೇರಿದಂತೆ ಭಾರತ ಸರ್ಕಾರ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ" ಎಂದು ಅವರು ಹೇಳಿದರು.

ಇಂಫಾಲ್, ಸೆಪ್ಟೆಂಬರ್ 13: 2023ರ ಜನಾಂಗೀಯ ಹಿಂಸಾಚಾರದ ನಂತರ ಇಂದು ಮಣಿಪುರಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi), ಮಣಿಪುರದ ಜನರು ತಮ್ಮ ಮಕ್ಕಳ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಶಾಂತಿಯನ್ನು ಆರಿಸಿಕೊಳ್ಳುವಂತೆ ಒತ್ತಾಯಿಸಿದರು. ನಾನು ಮತ್ತು ಭಾರತ ಸರ್ಕಾರ ರಾಜ್ಯದ ಜನರೊಂದಿಗೆ ನಿಲ್ಲುತ್ತೇವೆ ಎಂದು ಹೇಳಿದರು. ಹಾಗೇ, ಮಣಿಪುರದಲ್ಲಿ ಶಾಂತಿ ಮತ್ತು ಏಕತೆಗಾಗಿ ಮನವಿ ಮಾಡಿದರು. ಸ್ಥಿರತೆ, ನ್ಯಾಯ ಮತ್ತು ಸತ್ಯವಿಲ್ಲದೆ ಅಭಿವೃದ್ಧಿ ನಡೆಯಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದರು.
ಇಂದು ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಮಣಿಪುರ ಭಾರತದ ಪ್ರಗತಿಯ ಪ್ರಮುಖ ಸ್ತಂಭವಾಗಿದೆ. ಮಣಿಪುರದ ಭೂಮಿ ಧೈರ್ಯ ಮತ್ತು ದೃಢಸಂಕಲ್ಪದ ಭೂಮಿ. ಈ ಬೆಟ್ಟಗಳು ಪ್ರಕೃತಿಯ ಅಮೂಲ್ಯ ಕೊಡುಗೆಯಾಗಿದೆ ಮತ್ತು ಅದೇ ಸಮಯದಲ್ಲಿ, ಅವು ನಿಮ್ಮ ನಿರಂತರ ಕಠಿಣ ಪರಿಶ್ರಮವನ್ನು ಸಂಕೇತಿಸುತ್ತವೆ. ಮಣಿಪುರದ ಜನರ ಚೈತನ್ಯಕ್ಕೆ ನಾನು ವಂದಿಸುತ್ತೇನೆ.” ಎಂದಿದ್ದಾರೆ.
ಇದನ್ನೂ ಓದಿ: ಇದು ಕೇವಲ ರೈಲು ಮಾರ್ಗವಲ್ಲ, ಬದಲಾವಣೆಯ ಜೀವನಾಡಿ: ಮಿಜೋರಾಂ ರೈಲು ಮಾರ್ಗ ಲೋಕಾರ್ಪಣೆಗೊಳಿಸಿ ಮೋದಿ ಮಾತು
Manipur is a vital pillar of India’s progress. Addressing a programme during the launch of development initiatives in Churachandpur. https://t.co/1JENvDXOoE
— Narendra Modi (@narendramodi) September 13, 2025
ಕೇಂದ್ರ ಸರ್ಕಾರವು ಮಣಿಪುರದ ಜನರೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು. “ಎಲ್ಲಾ ಸಂಸ್ಥೆಗಳು ಶಾಂತಿಯುತವಾಗಿ ಒಟ್ಟಾಗಿ ಮುಂದುವರಿಯಿರಿ, ನಿಮ್ಮ ಕನಸುಗಳನ್ನು ನನಸಾಗಿಸಿ ಮತ್ತು ನಿಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಿ. ಮಣಿಪುರ ಒಂದು ಕಾಲದಲ್ಲಿ ಭರವಸೆ ಮತ್ತು ಕನಸುಗಳನ್ನು ಹೊಂದಿತ್ತು, ಆದರೆ ಹಿಂಸಾಚಾರದ ಹಿಡಿತದಲ್ಲಿ ಸಿಲುಕಿತ್ತು. ಎಲ್ಲಿಯಾದರೂ ಅಭಿವೃದ್ಧಿ ನಡೆಯಬೇಕಾದರೆ, ಸತ್ಯ ಮತ್ತು ನ್ಯಾಯದ ಜೊತೆಗೆ ಶಾಂತಿ ಅತ್ಯಗತ್ಯ” ಎಂದು ಅವರು ಹೇಳಿದರು.
#WATCH | Manipur: Prime Minister Narendra Modi interacted with locals during his visit to Imphal
(Source: DD) pic.twitter.com/uWSYtdzbFF
— ANI (@ANI) September 13, 2025
ಇದನ್ನೂ ಓದಿ: ಗಲಭೆಪೀಡಿತ ಮಣಿಪುರಕ್ಕೆ 2 ವರ್ಷದ ಬಳಿಕ ಇಂದು ಮೋದಿ ಭೇಟಿ: ವ್ಯಂಗ್ಯವಾಡಿದ ರಾಹುಲ್ ಗಾಂಧಿ
ಮಣಿಪುರದಲ್ಲಿ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಮಹತ್ವದ ಕ್ರಮವಾಗಿ, ಪ್ರಧಾನಿ ನರೇಂದ್ರ ಮೋದಿ ಚುರಾಚಂದ್‌ಪುರದಲ್ಲಿ 7,300 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಅಡಿಪಾಯ ಹಾಕಿದರು. ಪ್ರಮುಖ ಉಪಕ್ರಮಗಳಲ್ಲಿ 3,600 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಮಣಿಪುರದ ರಸ್ತೆಗಳು, ಒಳಚರಂಡಿ ಮತ್ತು ಆಸ್ತಿ ನಿರ್ವಹಣಾ ಸುಧಾರಣಾ ಯೋಜನೆ, 2,500 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದ 5 ರಾಷ್ಟ್ರೀಯ ಹೆದ್ದಾರಿ ಯೋಜನೆಗಳು, ಮಣಿಪುರ ಇನ್ಫೋಟೆಕ್ ಅಭಿವೃದ್ಧಿ (MIND) ಯೋಜನೆ ಮತ್ತು 9 ಸ್ಥಳಗಳಲ್ಲಿ ಹರಡಿರುವ ಕೆಲಸ ಮಾಡುವ ಮಹಿಳಾ ಹಾಸ್ಟೆಲ್‌ಗಳು ಸೇರಿವೆ. ಈ ಪ್ರಯತ್ನಗಳು ಈ ಈಶಾನ್ಯ ರಾಜ್ಯದಲ್ಲಿ ಸಮಗ್ರ ಬೆಳವಣಿಗೆಗೆ ಸರ್ಕಾರದ ಬದ್ಧತೆಯನ್ನು ಒತ್ತಿಹೇಳುತ್ತವೆ.
#WATCH | Imphal, Manipur: PM Narendra Modi says, “…Now this time of the 21st century is the time of the North East. Therefore, the Government of India has continuously given priority to the development of Manipur. As a result, the development rate of Manipur is constantly… pic.twitter.com/A9AhQdXimm
— ANI (@ANI) September 13, 2025
“ಮಣಿಪುರದಲ್ಲಿ ಜೀವನವನ್ನು ಮತ್ತೆ ಹಳಿಗೆ ತರಲು, ನಿರಾಶ್ರಿತ ಕುಟುಂಬಗಳಿಗೆ 7,000 ಹೊಸ ಮನೆಗಳನ್ನು ನಿರ್ಮಿಸಲು ಸಹಾಯ ಮಾಡುವುದು ಸೇರಿದಂತೆ ಭಾರತ ಸರ್ಕಾರ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಸುಮಾರು 3,000 ಕೋಟಿ ರೂ. ವಿಶೇಷ ಪ್ಯಾಕೇಜ್ ಅನ್ನು ಅನುಮೋದಿಸಲಾಗಿದೆ. ಸಂತ್ರಸ್ತರಿಗೆ ಸಹಾಯ ಮಾಡಲು ಮತ್ತು ಮಣಿಪುರದ ಬುಡಕಟ್ಟು ಯುವಕರನ್ನು ಬೆಂಬಲಿಸಲು ಕ್ರಮಗಳು ನಡೆಯುತ್ತಿವೆ ಎಂದು ಪ್ರಧಾನಿ ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




