ಚಾರ್ಮಾಡಿ ಘಾಟ್: ಗುಡ್ಡಕುಸಿತ ನೋಡಿದ್ದಾಯ್ತು, ಇನ್ನು ಮರಗಳು ಉರುಳಿ ರಸ್ತೆಗೆ ಬೀಳುವ ಸರದಿ!

ಅರುಣ್​ ಕುಮಾರ್​ ಬೆಳ್ಳಿ

Updated on: Jun 02, 2025 | 4:59 PM

ಚಾರ್ಮಾಡಿ ಘಾಟ್​ನಲ್ಲಿ ಪದೇಪದೇ ಗುಡ್ಡಕುಸಿತ ಉಂಟಾಗುತ್ತಿರುವುದರಿಂದ ಪ್ರತಿದಿನ ಚರ್ಚೆಯಲ್ಲಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಕಳೆದ ಮೂರು ವಾರಗಳಿಂದ ಸತತವಾಗಿ ಮಳೆಯಾಗುತ್ತಿದ್ದು ಚಾರ್ಮಾಡಿ ಘಾಟ್​ನಲ್ಲಿರುವ ಗುಡ್ಡಗಳಲ್ಲಿ ಬಿರುಕುಗಳು ಕಾಣಿಸುತ್ತಿವೆ. ರಸ್ತೆಗಳ ಅಗಲೀಕರಣ ಕಾರ್ಯಗಳಿಂದಲೂ ಬೆಟ್ಟಪ್ರದೇಶ ಶಿಥಿಲಗೊಳ್ಳುತ್ತಿದೆ ಎಂದು ಪರಿಸರವಾದಿಗಳು ಮತ್ತು ಆ ಭಾಗದ ನಿವಾಸಿಗಳು ಹೇಳುತ್ತಿದ್ದಾರೆ.

ಚಿಕ್ಕಮಗಳೂರು, ಜೂನ್ 2: ಚಾರ್ಮಾಡಿ ಘಾಟ್ ಮೂಲಕ ತಿರುಗಾಡುವ ವಾಹನ ಸವಾರರಿಗೆ ಇದೊಳ್ಳೆ ಪೀಕಲಾಟ ಮಾರಾಯ್ರೇ. ಒಂದೋ ಗುಡ್ಡ ಕುಸಿದು ರಸ್ತೆ ಬ್ಲಾಕ್ ಆಗುತ್ತದೆ ಇಲ್ಲವೇ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ವಾಹನ ಸಂಚಾರವನ್ನು ಅಕ್ಷರಶಃ ನಿಲುಗಡೆಗೆ ತರುತ್ತದೆ. ಇಲ್ನೋಡಿ, ರಾಷ್ಟ್ರೀಯ ಹೆದ್ದಾರಿ 73 ರಲ್ಲಿ (National Highway 73) ಬೃಹತ್ ಗಾತ್ರದ ಮರವೊಂದು ಉರುಳಿ ರಸ್ತೆಗೆ ಬಿದ್ದಿದೆ. ನಡುರಸ್ತೆಯಲ್ಲಿ ಮರ ಉರುಳಿ ಬಿದ್ದಿರುವುದರಿಂದ ಕಿಲೋಮೀಟರ್ ಗಟ್ಟಲೆ ರಸ್ತೆ ಜಾಮ್ ಆಗಿದೆ. ಎರಡೂ ಬದಿಯ ವಾಹನಗಳು ಸ್ತಬ್ಧವಾಗಿವೆ ಮತ್ತು ಸವಾರರು ಅಸಹಾಯಕತೆಯಿಂದ ಬುಲ್ಡೋಜರೊಂದು ಮರವನ್ನು ತೆರವುಗೊಳಿಸುತ್ತಿರುವ ದೃಶ್ಯ ವೀಕ್ಷಿಸುತ್ತಿದ್ದಾರೆ.

ಇದನ್ನೂ ಓದಿ:    ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಹುಚ್ಚು ಸಾಹಸಗಳನ್ನು ಮುಂದುವರಿಸಿರುವ ಅಲ್ಪಮತಿ ಪ್ರವಾಸಿಗರು!

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.