ಮೊಣಕಾಲ್ಮೂರು ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಸಚಿವ ಶ್ರೀರಾಮುಲು ಟ್ರ್ಯಾಕ್ಟರ್ ಓಡಿಸುತ್ತಾ ಕುಣಿದರು!
ಸಚಿವರ ಕ್ಷೇತ್ರದಲ್ಲಿ ಕಳೆದ ರಾತ್ರಿ ಗಣಪತಿ ವಿಸರ್ಜನೆ ಮೆರವಣಿಗೆ ನಡೆದಾಗ ಅವರು ವಿಘ್ನೇಶ್ವರನನ್ನು ಹೊತ್ತ ಟ್ರ್ಯಾಕ್ಟರ್ ಓಡಿಸಿದರಲ್ಲದೆ, ಕೂತಲ್ಲೇ ಎರಡೂ ಕೈಗಳನ್ನೆತ್ತಿ ಕುಣಿದಿದ್ದಾರೆ!
ಚಿತ್ರದುರ್ಗ: ಯಾರೇನೇ ಹೇಳಲಿ, ಬಿಜೆಪಿ ನಾಯಕರು ಕುಣಿಯುವುದನ್ನು ಬಿಡಲಾರರು. ಅತ್ತ ಹೊಸಕೋಟೆಯಲ್ಲಿ ಸಚಿವ ಎಮ್ ಟಿ ನಾಗರಾಜ್ (MTB Nagaraj) ಕುಣಿದರೆ, ಇತ್ತ ಚಿತ್ರದುರ್ಗದ ಮೊಣಕಾಲ್ಮೂರು (Monakalumuru) ಪಟ್ಟಣದಲ್ಲಿ ಸಾರಿಗೆ ಸಚಿವ ಬಿ ಶ್ರೀರಾಮುಲು (B Sriramulu) ರವಿವಾರ ರಾತ್ರಿ ಕುಣಿದಿದ್ದಾರೆ. ಸಚಿವರ ಕ್ಷೇತ್ರದಲ್ಲಿ ಕಳೆದ ರಾತ್ರಿ ಗಣಪತಿ ವಿಸರ್ಜನೆ ಮೆರವಣಿಗೆ ನಡೆದಾಗ ಅವರು ವಿಘ್ನೇಶ್ವರನನ್ನು ಹೊತ್ತ ಟ್ರ್ಯಾಕ್ಟರ್ ಓಡಿಸಿದರಲ್ಲದೆ, ಕೂತಲ್ಲೇ ಎರಡೂ ಕೈಗಳನ್ನೆತ್ತಿ ಕುಣಿದಿದ್ದಾರೆ! ಈ ವಿಡಿಯೋ ವೈರಲ್ ಆಗಿದೆ.