ಕಾಳಿಂಗ ಸರ್ಪದ ಗಾತ್ರವೇನೋ ದೊಡ್ಡದು, ಆದರೆ ಉಡ ನುಂಗಲು ಅದಕ್ಕೆ ಸಾಧ್ಯವಾಗಲಿಲ್ಲ!
ಉಡದ ಹಿಡಿತವೇ ಹಾಗೆ ಮಾರಾಯ್ರೇ. ಸ್ಥಳೀಯರು ಹೇಳಿರುವಂತೆ ಒಂದು ಗಂಟೆ ಕಾಲ ನುಂಗಲು ಪ್ರಯತ್ನಿಸಿದ ಸರ್ಪ ಇನ್ನು ಸಾಧ್ಯವಾಗದು ಅನಿಸಿದಾಗ ಉಡವನ್ನು ಬಿಟ್ಟು ಬಿಟ್ಟಿದೆ.
ಉತ್ತರ ಕನ್ನಡ: ಬಹಳ ರೋಚಕ ಮತ್ತು ಕುತೂಹಲಕಾರಿ ಈ ವಿಡಿಯೋ ನಮಗೆ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಯಾಣ ಕ್ರಾಸ್ ಬಳಿಯಿಂದ ಲಭ್ಯವಾಗಿದೆ. ಭಾರಿಗಾತ್ರದ ಕಾಳಿಂಗ ಸರ್ಪವೊಂದು (king cobra) ಉಡವನ್ನು (monitor) ನುಂಗುವ ವ್ಯರ್ಥ ಪ್ರಯತ್ನ ಮಾಡುತ್ತಿರುವ ದೃಶ್ಯವನ್ನು ಸ್ಥಳೀಯರೊಬ್ಬರು ಸೆರೆಹಿಡಿದಿದ್ದಾರೆ. ಉಡ ಒಂದು ಕಲ್ಲುಬಂಡೆಯನ್ನು (rock) ಬಲವಾಗಿ ಹಿಡಿದರದಿರುವುದರಿಂದ ಹಾವಿಗೆ ಅದನ್ನು ನುಂಗಲಾಗುತ್ತಿಲ್ಲ. ಉಡದ ಹಿಡಿತವೇ ಹಾಗೆ ಮಾರಾಯ್ರೇ. ಸ್ಥಳೀಯರು ಹೇಳಿರುವಂತೆ ಒಂದು ಗಂಟೆ ಕಾಲ ನುಂಗಲು ಪ್ರಯತ್ನಿಸಿದ ಸರ್ಪ ಇನ್ನು ಸಾಧ್ಯವಾಗದು ಅನಿಸಿದಾಗ ಉಡವನ್ನು ಬಿಟ್ಟು ಬಿಟ್ಟಿದೆ.
Latest Videos