ಉಮೇಶ ಕತ್ತಿ ಸ್ನೇಹಜೀವಿ ಮತ್ತು ಹಾಸ್ಯಪ್ರಜ್ಞೆ ಉಳ್ಳವರಾಗಿದ್ದರು: ಸಿದ್ದರಾಮಯ್ಯ
ಕತ್ತಿ ಸ್ನೇಹಜೀವಿಯಾಗಿದ್ದರು ಮತ್ತು ಅವರ ಹಾಸ್ಯಪ್ರಜ್ಞೆ ಅದ್ಭುತವಾಗಿತ್ತು ಎಂದು ಹೇಳಿದ ಸಿದ್ದರಾಮಯ್ಯ 1985ರಲ್ಲಿ ಅವರು ಮತ್ತು ತಾವು ಜೆ ಹೆಚ್ ಪಟೇಲ್ ಸಂಪುಟದಲ್ಲಿ ಸಚಿವರಾಗಿದ್ದನ್ನು ಸ್ಮರಿಸಿದರು.
ಬೆಂಗಳೂರು: ವಿಧಾನ ಸಭೆಯ ಮಾನ್ಸೂನ್ ಅಧಿವೇಶನ (Monsoon Session) ಸೋಮವಾರದಿಂದ ಆರಂಭವಾಗಿದೆ. ಅಧಿವೇಶನದ ಮೊದಲ ದಿನ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramaiah) ಮೊನ್ನೆಯಷ್ಟೇ ನಿಧನ ಹೊಂದಿದ ಉಮೇಶ್ ಕತ್ತಿ (Umesh Katti) ಅವರೊಂದಿಗಿನ ಬಾಂಧವ್ಯವನ್ನು ನೆನೆದರು. ಕತ್ತಿ ಸ್ನೇಹಜೀವಿಯಾಗಿದ್ದರು ಮತ್ತು ಅವರ ಹಾಸ್ಯಪ್ರಜ್ಞೆ ಅದ್ಭುತವಾಗಿತ್ತು ಎಂದು ಹೇಳಿದ ಸಿದ್ದರಾಮಯ್ಯ 1985ರಲ್ಲಿ ಅವರು ಮತ್ತು ತಾವು ಜೆ ಹೆಚ್ ಪಟೇಲ್ ಸಂಪುಟದಲ್ಲಿ ಸಚಿವರಾಗಿದ್ದನ್ನು ಸ್ಮರಿಸಿದರು.
Latest Videos