ಓಲಾ ಇ-ಸ್ಕೂಟರ್ ನಂತರ ಒಮೆಗಾ ಸೀಕಿ ಮೊಬಿಲಿಟಿ ಕಂಪನಿ ಎರಡು ಬಗೆಯ ಇ-ಸ್ಕೂಟರ್ಗಳನ್ನು ಲಾಂಚ್ ಮಾಡಲಿದೆ
ಕಂಪನಿಯ ಮೂಲಗಳ ಪ್ರಕಾರ ಒಮೆಗಾ ಸೀಕಿ ಜೊರೊ ಮತ್ತು ಮತ್ತು ಒಮೆಗಾ ಸೀಕಿ ಫಿಯಾರೆ ಸ್ಕೂಟರ್ಗಳ ಬುಕಿಂಗ್ ಇದೇ ತಿಂಗಳ ಕೊನೆವಾರದಲ್ಲಿ ಆರಂಭವಾಗಲಿದೆ. ಆದರೆ ವಾಹನಗಳನ್ನು ಯಾವಾಗ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಇನ್ನೂ ಇಲ್ಲ.
ಶುಕ್ರವಾರವಷ್ಟೇ ನಾವು ಓಲಾ ಸಂಸ್ಥೆಯು ಆಗಸ್ಟ್ 15 ರಂದು ಲಾಂಚ್ ಮಾಡಲಿರುವ ಇ-ಸ್ಕೂಟರ್ಗಳ ಬಗ್ಗೆ ಚರ್ಚೆ ನಡೆಸಿದೆವು. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಒಮೆಗಾ ಸೀಕಿ ಮೊಬಿಲಿಟಿ ಕಂಪನಿ ಸಹ ತನ್ನ ಎರಡು ಇ-ಸ್ಕೂಟರ್ಗಳೊಂದಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಸೆಗ್ಮೆಂಟ್ಗೆ ಎಂಟ್ರಿ ನೀಡುತ್ತಿದೆ. ತಾನು ಬಿಡುಗಡೆ ಮಾಡಲಿರುವ ಸ್ಕೂಟರ್ಗಳಿಗೆ ಅದು ಜೊರೊ ಮತ್ತು ಫಿಯಾರೆ ಅಂತ ಹೆಸರಿಟ್ಟಿದೆ. ಈ ಎರಡು ಸ್ಕೂಟರ್ಗಳನ್ನು ಪುಣೆಯಲ್ಲಿರುವ ಕಂಪನಿಯ ಫ್ಲ್ಯಾಗ್ಶಿಪ್ ಶೋ ರೂಮ್ನಲ್ಲಿ ಪ್ರದರ್ಶನಕ್ಕಿಡಲಾಗಿದೆ.
ಕಂಪನಿಯ ಮೂಲಗಳ ಪ್ರಕಾರ ಒಮೆಗಾ ಸೀಕಿ ಜೊರೊ ಮತ್ತು ಮತ್ತು ಒಮೆಗಾ ಸೀಕಿ ಫಿಯಾರೆ ಸ್ಕೂಟರ್ಗಳ ಬುಕಿಂಗ್ ಇದೇ ತಿಂಗಳ ಕೊನೆವಾರದಲ್ಲಿ ಆರಂಭವಾಗಲಿದೆ. ಆದರೆ ವಾಹನಗಳನ್ನು ಯಾವಾಗ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಇನ್ನೂ ಇಲ್ಲ. ಈ ವರ್ಷದ ಹಬ್ಬದ ಸೀಸನ್ನಲ್ಲಿ ಎರಡೂ ಸ್ಕೂಟರ್ಗಳ ಬೆಲೆಯನ್ನು ಪ್ರಕಟಿಸಲಾಗುವುದು ಮತ್ತು ಅವುಗಳನ್ನು ಲಾಂಚ್ ಕೂಡ ಮಾಡಲಾಗುವುದು ಎಂದು ಮೂಲಗಳು ಹೇಳಿವೆ.
ಆರಂಭಿಕ ಹಂತದಲ್ಲಿ ಒಮೆಗಾ ಇ-ಸ್ಕೂಟರ್ಗಳನ್ನು ದೇಶದಾದ್ಯಂತ 115 ಸೆಂಟರ್ಗಳಲ್ಲಿ ಮಾರಾಟ ಮಾಡಲಾಗುತ್ತದೆ. ವಾಹನಗಳ ಬೆಲೆಗೆ ಸಂಬಂಧಿಸಿದಂತೆ ಹೇಳುವುದಾದರೆ ಸಂಸ್ಥೆಯು ಕಾದು ನೋಡುವ ನೀತಿಯನ್ನು ಅನುಸರಿಸುತ್ತಿರುವಂತೆ ಕಾಣುತ್ತಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ಓಲಾ ಕಂಪನಿಯು ತನ್ನ ಸ್ಕೂಟರ್ ಬೆಲೆ ನಿಗದಿಪಡಿಸಿದ ನಂತರ ಒಮೆಗಾ ಅದಕ್ಕೆ ಸ್ಪರ್ಧಾತ್ಮಕವಾದ ಬೆಲೆಯನ್ನು ಇಡಬಹುದು. ಒಮೆಗಾದ ಸ್ಕೂಟರ್ಗಳು ಒಮ್ಮೆ ರೀಚಾರ್ಜ್ ಮಾಡಿದರೆ 80 ಕಿಮೀಗಳವರೆಗೆ ಓಡಬಲ್ಲವಂತೆ.
ಇದನ್ನೂ ಓದಿ: ದೇವರು ಯಾವ ರೂಪದಲ್ಲಿ ಬೇಕಾದರೂ ಬರಬಹುದು ಎನ್ನುವುದಕ್ಕೆ ಸಾಕ್ಷಿ ಇದು: ವಿಡಿಯೋ ನೋಡಿ