ಕೋವಿಡ್ ಸಮಯದ ಆರೋಪಗಳ ತನಿಖೆ ಸರ್ಕಾರಕ್ಕೆ ಈಗ್ಯಾಕೆ ನೆನಪಾಗಿದ್ದು? ಹೆಚ್ ಡಿ ಕುಮಾರಸ್ವಾಮಿ
ಮುಡಾ ಹಗರಣಕ್ಕೆ ಕಾರಣವಾದ 14 ಸೈಟುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಪಸ್ಸು ಮಾಡಿರುವುದನ್ನು ಕುಮಾರಸ್ವಾಮಿ ಲೇವಡಿ ಮಾಡಿದ ಕುಮಾರಸ್ವಾಮಿ, ಪರಿಶಿಷ್ಟ ವರ್ಗಕ್ಕೆ ಸೇರಬೇಕಾದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ದುರುಪಯೋಗಪಡಿಸಿಕೊಂಡ ಕುಖ್ಯಾತಿಯೂ ಸರ್ಕಾರದ ಮೇಲಿದೆ ಎಂದರು.
ಮೈಸೂರು: ಮೈಸೂರಲ್ಲಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ; ಹಿಂದಿನ ಸರ್ಕಾರವು ಕೋವಿಡ್ ಸಮಯದಲ್ಲಿ ನಡೆಸಿದ ಎನ್ನಲಾಗಿರುವ ಅವ್ಯವಹಾರಗಳನ್ನು ತನಿಖೆ ಮಾಡಿಸಲು ಸಿದ್ದರಾಮಯ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಖಂಡಿಸಿದರು. ಅಧಿಕಾರಕ್ಕೆ ಬಂದು ಒಂದೂವರೆ ವರ್ಷಗಳ ನಂತರ ತನಿಖೆ ನಡೆಸುವ ಜರೂರತ್ತು ಎದುರಾಗಿದ್ದು ಯಾಕೆ ಎಂದು ಅವರು ಪ್ರಶ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿದ್ದರಾಮಯ್ಯ ಮತ್ತು ಹೆಚ್ ಡಿ ಕುಮಾರಸ್ವಾಮಿ ಪರಸ್ಪರ ಎದುರಾದ ಸಂದರ್ಭ ಹೇಗಿತ್ತು ಗೊತ್ತಾ?