ಚಿಕ್ಕಪ್ಪ ಡಿಕೆ ಸುರೇಶ್ ಕಾರಿಗೆ ತಾಯಿಯೊಂದಿಗೆ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್ ಮಕ್ಕಳು

ಚಿಕ್ಕಪ್ಪ ಡಿಕೆ ಸುರೇಶ್ ಕಾರಿಗೆ ತಾಯಿಯೊಂದಿಗೆ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್ ಮಕ್ಕಳು

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 11, 2024 | 12:37 PM

ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅನಿರೀಕ್ಷಿತ ಸೋಲು ಅನುಭವಿಸಿದ ಬಳಿಕ ಡಿಕೆ ಸುರೇಶ್ ಲೋ ಪ್ರೊಫೈಲ್ ಕಾಯ್ದಕೊಂಡಿದ್ದಾರೆ. ಮೊದಲಾದರೆ ಅವರು ಪ್ರತಿದಿನ ಮಾಧ್ಯಮಗಳಲ್ಲಿ ಕಾಣಿಸುತ್ತಿದ್ದರು, ಈಗ ಅಪರೂಪಕ್ಕೊಮ್ಮೆ ಕಾಣಿಸುತ್ತಿದ್ದಾರೆ.

ಬೆಂಗಳೂರು: ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪತ್ನಿ ಉಷಾ ಶಿವಕುಮಾರ್, ಪುತ್ರಿ ಐಶ್ವರ್ಯ ಮತ್ತು ಮಗ ಆಕಾಶ್ ಕೆಂಪೇಗೌಡ ಅವರು ಆಯುಧ ಪೂಜೆ ನಿಮಿತ್ತ ಶಿವಕುಮಾರ್ ಸಹೋದರ ಮತ್ತು ಮಾಜಿ ಸಂಸದ ಡಿಕೆ ಸುರೇಶ್ ಕಾರಿಗೂ ಪೂಜೆ ಸಲ್ಲಿಸಿದರು. ಶಿವಕುಮಾರ್ ಮನೆಯಲ್ಲಿ ದಸರಾ ಹಬ್ಬದ ಸಂಭ್ರಮ! ಕೆಲ ಆಪ್ತರು ಮತ್ತು ಸಂಬಂಧಿಕರು ಮನೆಯಲ್ಲಿ ನೆರೆದಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮೈಸೂರು ದಸರಾ 2024: ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ ಲೈವ್​ ಆಗಿ ನೋಡಿ