‘ಜೇಮ್ಸ್​’ ಚಿತ್ರದಲ್ಲಿ ಅಪ್ಪು ವಾಯ್ಸ್ ರೀ-ಕ್ರಿಯೇಟ್​; ಶಾಕ್​ ಆದ ಅಶ್ವಿನಿ ಪುನೀತ್​ ರಾಜ್​ಕುಮಾರ್

| Updated By: ರಾಜೇಶ್ ದುಗ್ಗುಮನೆ

Updated on: Apr 18, 2022 | 2:13 PM

ಪುನೀತ್ ಅವರ ಧ್ವನಿಯಲ್ಲಿ ವಿಡಿಯೋ ನೋಡಿ ಅಶ್ವಿನಿ ಪುನೀತ್ ರಾಜ್​ಕುಮಾರ್, ಶಿವರಾಜ್​ಕುಮಾರ್ ಹಾಗೂ ರಾಘವೇಂದ್ರ ರಾಜ್​ಕುಮಾರ್ ಒಮ್ಮೆ ಶಾಕ್​ಗೆ ಒಳಗಾದರು.

ಪುನೀತ್ ರಾಜ್​ಕುಮಾರ್  (Puneeth Rajkumar) ನಟನೆಯ ‘ಜೇಮ್ಸ್’ ಸಿನಿಮಾ (James Movie) ಮಾರ್ಚ್​ 17ರಂದು ತೆರೆಗೆ ಬಂದಿತ್ತು. ಅವರ ಬರ್ತ್​ಡೇ ಪ್ರಯುಕ್ತ ರಿಲೀಸ್ ಆದ ಈ ಸಿನಿಮಾ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿತ್ತು. ಆದರೆ, ಸಿನಿಮಾದಲ್ಲಿ ಅವರದ್ದೇ ಧ್ವನಿ ಇಲ್ಲ ಎನ್ನುವ ನೋವು ಅಭಿಮಾನಿಗಳಿಗೆ ಕಾಡಿತ್ತು. ಆದರೆ, ಈಗ ನೂತನ ತಂತ್ರಜ್ಞಾನ ಬಳಸಿ ಸಿನಿಮಾಗೆ ಅಪ್ಪು ಧ್ವನಿಯನ್ನು ರೀ ಕ್ರಿಯೇಟ್ ಮಾಡಲಾಗಿದೆ. ಈ ಸಿನಿಮಾದ ಒಂದು ವಿಡಿಯೋ ತುಣುಕು ವೈರಲ್ ಆಗಿದ್ದು, ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ಈ ರೀತಿಯ ವಿಚಾರಗಳು ಅಭಿಮಾನಿಗಳಿಗೆ, ಕುಟುಂಬದವರಿಗೆ ಅಚ್ಚರಿ ನೀಡೋದು ಸಹಜ. ಪುನೀತ್ ಅವರ ಧ್ವನಿಯಲ್ಲಿ ವಿಡಿಯೋ ನೋಡಿ ಅಶ್ವಿನಿ ಪುನೀತ್ ರಾಜ್​ಕುಮಾರ್ (Ashwini Puneeth), ಶಿವರಾಜ್​ಕುಮಾರ್ ಹಾಗೂ ರಾಘವೇಂದ್ರ ರಾಜ್​ಕುಮಾರ್ ಒಮ್ಮೆ ಶಾಕ್​ಗೆ ಒಳಗಾದರು. ಅದೇ ವೇಳೆ ಅವರಿಗೆ ಈ ವಿಚಾರದಿಂದ ಖುಷಿ ಕೂಡ ಆಗಿದೆ. ಈ ಬಗ್ಗೆ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: James: ಪುನೀತ್ ಧ್ವನಿಯಲ್ಲಿಯೇ ಪ್ರದರ್ಶನ ಕಾಣಲಿದೆ ‘ಜೇಮ್ಸ್’; ಹೇಗೆ? ಎಂದಿನಿಂದ? ಅಪ್ಪು ಅಭಿಮಾನಿಗಳಿಗಿದು ಖುಷಿಯ ವಿಚಾರ

ಮೈಸೂರು ಜಾತ್ರೆಯಲ್ಲಿ ಎತ್ತಿನ ಕೊಂಬುಗಳಲ್ಲಿ ಮಿಂಚಿದ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್; ವಿಡಿಯೋ ಇಲ್ಲಿದೆ

Follow us on