ಹುಬ್ಬಳ್ಳಿಯ ಹನುಮಾನ್ ದೇವಸ್ಥಾನಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭೇಟಿ ನೀಡಿದರು

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ರಾಜ್ಯ ಗೃಹಸಚಿವ ಅರಗ ಜ್ಞಾನೇಂದ್ರ ಮತ್ತು ಕೆಲ ಸ್ಥಳೀಯ ನಾಯಕರು ಸದರಿ ಪ್ರಕರಣದ ಕೇಂದ್ರವಾಗಿರುವ ದಿಡ್ಡಿಕೇರಿ ಓಣಿಯಲ್ಲಿನ ಹನುಮಾನ ದೇವಸ್ಥಾನಕ್ಕೆ ರವಿವಾರ ಸಾಯಂಕಾಲ ಭೇಟಿ ನೀಡಿದರು.

TV9kannada Web Team

| Edited By: Arun Belly

Apr 18, 2022 | 4:36 PM

ಹುಬ್ಬಳ್ಳಿಯಲ್ಲಿ ಈಗಲೂ ಬೂದಿ ಮುಚ್ಚಿದ ಕೆಂಡದಂಥ ವಾತಾವರವಿದೆ. ಕೆಲ ಕಿಡಿಗೇಡಿ ಮುಸ್ಲಿಂ ಯುವಕರು (Muslim youths) ಎಸಗಿದ ವಿವೇಕಹೀನ ಕೃತ್ಯದಿಂದ ಇಡೀ ನಗದರದಲ್ಲಿ ಪ್ರಕ್ಷುಬ್ದ ವಾತಾವರಣ ತಲೆದೋರಿದೆ. ಹುಬ್ಬಳ್ಳಿಯಲ್ಲಿ ಪ್ರತಿಬಂಧಕಾಜ್ಞೆ (prohibitory orders) ಜಾರಿಯಲ್ಲಿರುವುದರಿಂದ ಕಳೆದೆರಡು ದಿನಗಳಿಂದ ಯಾವುದೇ ಅಹಿತಕರ ಘಟನೆ ಜರುಗಿಲ್ಲವಾದರೂ ಒಂದು ಬಗೆಯ ಅಸಹನೀಯ ಶಾಂತಿ ಅಲ್ಲಿ ನೆಲೆಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಹಲವು ಜನರನ್ನು ಬಂಧಿಸಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi), ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ರಾಜ್ಯ ಗೃಹಸಚಿವ ಅರಗ ಜ್ಞಾನೇಂದ್ರ ಮತ್ತು ಕೆಲ ಸ್ಥಳೀಯ ನಾಯಕರು ಸದರಿ ಪ್ರಕರಣದ ಕೇಂದ್ರವಾಗಿರುವ ದಿಡ್ಡಿಕೇರಿ ಓಣಿಯಲ್ಲಿನ ಹನುಮಾನ ದೇವಸ್ಥಾನಕ್ಕೆ ರವಿವಾರ ಸಾಯಂಕಾಲ ಭೇಟಿ ನೀಡಿದರು.

ಸ್ಥಳೀಯ ನಿವಾಸಿಗಳು ಮತ್ತು ದೇವಸ್ಥಾನಕ್ಕೆ ನಿಯಮಿತವಾಗಿ ಭೇಟಿ ನೀಡಿ ಪೂಜೆ ಸಲ್ಲಿಸುವ ಜನ ಪ್ರಲ್ಹಾದ್ ಜೋಶಿಯವರಿಗೆ ನಡೆದ ಘಟನೆ ಬಗ್ಗೆ ವಿವರ ನೀಡುತ್ತಿರುವುದು ವಿಡಿಯೋನಲ್ಲಿ ನೋಡಬಹುದು. ಇಲ್ಲಿನ ಜನ ಸಹಜವಾಗೇ ಕೋಪದಲ್ಲಿದ್ದಾರೆ ಮತ್ತು ಅಸಾಮಾಧಾನಗೊಂಡಿದ್ದಾರೆ.

ದೊಂಬಿ ಸೃಷ್ಟಿಸುವವರು ಯಾವುದೇ ಸಮುದಾಯದವರಾಗಿರಲಿ ಅವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಖಡಕ್ ಎಚ್ಚರಿಕೆ ನೀಡಿದ್ದರೂ ಸಮಾಜದ ಸ್ವಾಸ್ಥ್ಯ ಕದಡುವುದನ್ನು ತಮ್ಮ ದ್ಯೇಯವಾಗಿಸಿಕೊಂಡಿರುವ ಕೆಲವೇ ಕೆಲ ಜನ ಮುಖ್ಯಮಂತ್ರಿಗಳ ಎಚ್ಚರಿಕೆಯನ್ನೂ ದಿಕ್ಕರಿಸುವಷ್ಟು ದಾರ್ಷ್ಟ್ಯತೆ ಪ್ರದರ್ಶಿಸುತ್ತಿದ್ದಾರೆ.

ರಾಜಕೀಯ ಪಕ್ಷಗಳು ಒಟ್ಟಾಗಿ ಇಂಥ ಕೃತ್ಯಗಳನ್ನು ಖಂಡಿಸುವುದನ್ನು ಬಿಟ್ಟು ಪರಸ್ಪರ ದೋಷಾರೋಪಣೆ ಮಾಡುತ್ತಾ ಕುಳಿತರೆ ಅದರಿಂದ ಸಾಮಾನ್ಯ ಜನತೆಗೆ ತೊಂದರೆಯಾಗುತ್ತದೆ. ಈ ಸೂಕ್ಷ್ಮವನ್ನು ಎಲ್ಲ ಪಕ್ಷಗಳು ಅರ್ಥಮಾಡಿಕೊಳ್ಳಬೇಕು.

ಇದನ್ನೂ ಓದಿ:   ಹುಬ್ಬಳ್ಳಿಯಲ್ಲಿ ಗಲಾಟೆ ಮಾಡಿದವರನ್ನು ಯಾವುದೇ ಕಾರಣಕ್ಕೂ ಬಿಡಬೇಡಿ, ಆದರೆ ಮುಗ್ಧರಿಗೆ ತೊಂದರೆ ಕೊಡುವುದು ಬೇಡ; ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್

Follow us on

Click on your DTH Provider to Add TV9 Kannada