ಯುವತಿಯಿಂದ ತಿರಸ್ಕೃತನಾದ ಹೇಡಿಯೊಬ್ಬ ಗೆಳೆಯರ ಗುಂಪು ಕಟ್ಟಿಕೊಂಡು ಆಮಾಯಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ!

ಯುವತಿಯಿಂದ ತಿರಸ್ಕೃತನಾದ ಹೇಡಿಯೊಬ್ಬ ಗೆಳೆಯರ ಗುಂಪು ಕಟ್ಟಿಕೊಂಡು ಆಮಾಯಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 08, 2022 | 11:47 AM

ಮಂಜೇಶ್ ಹೆಸರಿನ ಯುವಕ ಅವನಷ್ಟೇ ಕೆಟ್ಟ ಸ್ವಭಾವದ ಸ್ನೇಹಿತರ ಗುಂಪು ಕಟ್ಟಿಕೊಂಡು ರಸ್ತೆ ಪಕ್ಕ ತನ್ನ ಸ್ಕೂಟರ್ ಮೇಲೆ ಕೂತಿದ್ದ ಅಮಾಯಕ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಬೆಂಗಳೂರು:  ಈ ಹುಚ್ಚಾಟಕ್ಕೆ ಯಾವುದೇ ತರ್ಕವಿಲ್ಲ, ಕ್ಷಮೆಯೂ ಇಲ್ಲ ಮಾರಾಯ್ರೇ. ಯುವತಿಯೊಬ್ಬಳೊಂದಿಗೆ ಪ್ರೇಮ ನಿವೇದನೆ ಮಾಡಿಕೊಂಡು ಅವಳಿಂದ ತಿರಸ್ಕೃನಾದ ಅವಿವೇಕಿ, ಈಡಿಯಟ್, ಹೇಡಿ, ವಿಲಕ್ಷಣ ಮತ್ತು ಅಪರಾಧೀ ಮನೋಭಾವದ ಮಂಜೇಶ್ (Manjesh) ಹೆಸರಿನ ಯುವಕ ಅವನಷ್ಟೇ ಕೆಟ್ಟ ಸ್ವಭಾವದ ಸ್ನೇಹಿತರ ಗುಂಪು ಕಟ್ಟಿಕೊಂಡು ರಸ್ತೆ ಪಕ್ಕ ತನ್ನ ಸ್ಕೂಟರ್ ಮೇಲೆ ಕೂತಿದ್ದ ಅಮಾಯಕ (innocent) ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಬೆಂಗಳೂರು ಮಾಗಡಿ ರಸ್ತೆಯಲ್ಲಿರುವ (Magadi Road) ಬಾರೊಂದರ ಎದುರು ನಡೆದ ಹಲ್ಲೆ ಸಿಸಿಟಿವಿಯೊಂದರಲ್ಲಿ ಸೆರೆಯಾಗಿದೆ. ಯುವಕನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.