ಬೆಂಗಳೂರಲ್ಲಿ ಮಳೆ, ಹೆಬ್ಬಾಳ ವಿಮಾನ ನಿಲ್ದಾಣ ರಸ್ತೆಯಲ್ಲಿ ಎಂದಿನ ಟ್ರಾಫಿಕ್ ಸಮಸ್ಯೆ

|

Updated on: Oct 19, 2024 | 3:38 PM

ಹೆಬ್ಬಾಳ ಮುಖ್ಯರಸ್ತೆ ಅಂದರೆ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯು ನಗರದಲ್ಲಿ ಮಳೆಯಾದರೆ ಅತಿಹೆಚ್ಚು ಪ್ರಭಾವಕ್ಕೊಳಗಾಗುವ ರಸ್ತೆ ಎಂದರೆ ಉತ್ಪ್ರೇಕ್ಷೆ ಅನಿಸದು. ಇದು ನಗರದ ಅತ್ಯಂತ ಬ್ಯೂಸಿ ಮತ್ತು ವಾಹನದಟ್ಟಣೆಯ ಪ್ರದೇಶವಾಗಿದ್ದು ಅವೈಜ್ಞಾನಿಕ ರಸ್ತೆ ನಿರ್ಮಾಣ ಕೂಡ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

ಬೆಂಗಳೂರು: ನಗರದಲ್ಲಿ ಮಳೆಯಾಗತೊಡಗಿದರೆ ನಿವಾಸಿಗಳು ಬೆಚ್ಚಿ ಬೀಳಲಾರಂಭಿಸಿದ್ದಾರೆ. ಒಂದೆಡೆ ಟ್ರಾಫಿಕ್ ಸಮಸ್ಯೆಯಾದರೆ ಮತ್ತೊಂದೆಡೆ ರಸ್ತೆ ಮತ್ತು ಮನೆಗಳಿಗೆ ನುಗ್ಗುವ ನೀರು. ಇಂದು ಮಧ್ಯಾಹ್ನ ಬೆಂಗಳೂರಲ್ಲಿ ಮಳೆಯಾಯಿತು. ಹೆಬ್ಬಾಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಿಂದಾಗಿ ಉಂಟಾದ ಸ್ಥಿತಿಯನ್ನು ನಮ್ಮ ವರದಿಗಾರ ತೋರಿಸಿದ್ದಾರೆ. ಏರ್ಪೋರ್ಟ್ ನಿಂದ ನಗರದೊಳಗೆ ಬರುವ ರಸ್ತೆಯಲ್ಲಿ ಕಾರು ಮತ್ತು ಬೇರೆ ವಾಹನಗಳು ಆಮೆಗತಿಯಲ್ಲಿ ಸಾಗುತ್ತಿರುವುದನ್ನು ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬೆಂಗಳೂರು ಮಳೆ ಅವಾಂತರ: ತುಂತುರು ಅಲ್ಲಿ ನೀರ ಹಾಡು, ಹಗಲಿನಲಿ, ಇರುಳಿನಲಿ, ಬಿಬಿಎಂಪಿ ಮಲಗಿರಲಿ!

Follow us on