ತಪ್ಪು ನಡೆಯಿತೇ? ಕಟಕಟೆಯಲ್ಲಿ ಬಿಗ್ಬಾಸ್: ವಿಚಾರಣೆ ನಡೆಸಲಿರುವ ಸುದೀಪ್
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 11 ರಲ್ಲಿ ಕಳೆದ ವಾರ ಹಲವು ಘಟನೆಗಳು ಘಟಿಸಿವೆ. ಮನೆ ಮಂದಿಯಿಂದ ಭಾರಿ ಜಗಳದಲ್ಲಿ ಪಾಲ್ಗೊಂಡಿದ್ದು, ಬಿಗ್ಬಾಸ್ ಮನೆಯಿಂದ ಲಾಯರ್ ಜಗದೀಶ್ ಹಾಗೂ ರಂಜಿತ್ ಅವರುಗಳು ಹೊರಗೆ ಹಾಕಲಾಗಿದೆ.
ಬಿಗ್ಬಾಸ್ ಕನ್ನಡ ಸೀಸನ್ 11 ರಲ್ಲಿ ಪ್ರತಿದಿನ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಕಳೆದ ವಾರವಂತೂ ಹಲವು ಘಟನೆಗಳು ಬಿಗ್ಬಾಸ್ ಮನೆಯಲ್ಲಿ ನಡೆದಿವೆ. ಹೊರಗೆ ಸುದೀಪ್, ಬಿಗ್ಬಾಸ್ಗೆ ವಿದಾಯ ಹೇಳಿದ್ದು ಪ್ರಮುಖ ಸುದ್ದಿಯಾದರೆ ಒಳಗೆ ಲಾಯರ್ ಜಗದೀಶ್ ಮತ್ತು ರಂಜಿತ್ ಪರಸ್ಪರ ಕೈ-ಕೈ ಮಿಲಾಯಿಸಿಕೊಂಡು ಬಿಗ್ಬಾಸ್ ಮನೆಯಿಂದ ಹೊರಗೆ ಹೋಗಿದ್ದು ಇನ್ನೂ ದೊಡ್ಡ ಸುದ್ದಿಯಾಗಿದೆ. ಇದೀಗ ಮತ್ತೊಂದು ಶನಿವಾರ ಬಂದಿದೆ. ವೀಕೆಂಡ್ ಪಂಚಾಯಿತಿಗೆ ಸುದೀಪ್ ಬಂದಿದ್ದಾರೆ. ವೀಕೆಂಡ್ನ ಮೊದಲ ಪ್ರೋಮೋನಲ್ಲಿ ಸುದೀಪ್, ಬಿಗ್ಬಾಸ್ನಿಂದ ತಪ್ಪಾಗಿದೆಯೇ? ಬಿಗ್ಬಾಸ್ ತಪ್ಪು ನಿರ್ಣಯ ತೆಗೆದುಕೊಂಡಿದ್ದಾರೆಯೇ? ಎಂದಿದ್ದು, ಬಿಗ್ಬಾಸ್ ತೆಗೆದುಕೊಂಡಿರುವ ನಿರ್ಣಯವನ್ನು ವಿಮರ್ಶೆಗೆ ಒಳಪಡಿಸುವ ಸೂಚನೆ ನೀಡಿದ್ದಾರೆ ಸುದೀಪ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 19, 2024 02:21 PM
Latest Videos