Karnataka Assembly Session: ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಪಗೊಂಡು ಸದನದಿಂದ ಹೊರನಡೆದಿದ್ದು ಯಾಕೆ ಗೊತ್ತಾ?
ಪಂಚಮಸಾಲಿ ಸಮುದಾಯದವರು 2ಎ ಮೀಸಲಾತಿಗಾಗಿ ಮುಷ್ಕರ ನಡೆಸುತ್ತಿದ್ದು, ಮಂಗಳವಾರದಂದು ಪ್ರತಿಭಟನೆಕಾರರ ಮೇಲೆ ಲಾಠಿಚಾರ್ಜ್ ನಡೆದಿದ್ದನ್ನು ವಿರೋಧ ಪಕ್ಷದ ಶಾಸಕರು ತೀವ್ರವಾಗಿ ಖಂಡಿಸುತ್ತಾ ಸದನದಲ್ಲಿ ಸರ್ಕಾರದ ವಿರುದ್ಧ ಕೂಗಾಡುತ್ತಿದ್ದಾರೆ. ಸದನ ಕಾರ್ಯಕಲಾಪ ನಡೆಯಲು ಬಿಡುತ್ತಿಲ್ಲ ಎಂದು ಅಡಳಿತ ಪಕ್ಷದವರು ಅರೋಪಿಸುತ್ತಿದ್ದಾರೆ. ಅದೇ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಸದನದಿಂದ ಹೊರನಡೆದಿದ್ದಾರೆ.
ಬೆಳಗಾವಿ: ವಿಧಾನಸಭಾ ಅಧಿವೇಶನ ನಡೆಯುವಾಗ ವಿರೋಧ ಪಕ್ಷದ ಶಾಸಕರು ಸರ್ಕಾರದ ವಿರುದ್ಧ ಸಿಡಿದೆದ್ದು ಸದನದ ಬಾವಿಗಿಳಿಯುವುದು, ಸದನದಿಂದ ಹೊರನಡೆಯುವುದನ್ನು ಮಾಡುತ್ತಾರೆ. ಆಡಳಿಪ ಪಕ್ಷದವರು ಆ ಕೆಲಸ ಮಾಡಲಾರರು ಎಂಬ ತಿಳುವಳಿಕೆ ನಮ್ಮಲ್ಲಿದೆ. ಅದರೆ ಇಲ್ನೋಡಿ, ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕೋಪದಿಂದ ಭುಸುಗುಡುತ್ತಾ ಸದನದಿಂದ ಹೊರಬರುತ್ತಿದ್ದಾರೆ! ಏನಾಯ್ತು ಸರ್ ಅಂತ ಹೊರಗಿದ್ದ ಪತ್ರಕರ್ತರು ಕೇಳಿದಾಗ, ವಿರೋಧ ಪಕ್ಷದವರು ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿದ್ದಾರೆ, ಅವರು ಹೇಳೋದು ಮಾತ್ರ ಸರೀನಾ, ಅವರು ಹೇಳೋದು ವೇದವಾಕ್ಯನಾ? ಎಂದು ಕೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ತೀವ್ರಗೊಂಡ ಪಂಚಮಸಾಲಿ ಮೀಸಲಾತಿ ಹೋರಾಟ, ಲಾಠಿಚಾರ್ಜ್ ಹಿನ್ನೆಲೆ ಸಿದ್ದರಾಮಯ್ಯ ಕ್ಷಮೆ ಕೇಳಲು ಆಗ್ರಹ
Published on: Dec 12, 2024 06:22 PM