Karnataka Assembly Session; ಹಿಂದೆ ಸಿಎಂ ಬೊಮ್ಮಾಯಿ ನೀಡಿದ ಮೀಸಲಾತಿಯನ್ನು ಸರ್ವೋಚ್ಛ ನ್ಯಾಯಾಲಯ ತಡೆದಿತ್ತು: ಕಾಶಪ್ಪನವರ್
ಚರ್ಚೆಗೆ ಮುಖ್ಯಮಂತ್ರಿಯವರು 10 ಜನ ಪಂಚಮಸಾಲಿ ಮುಖಂಡರನ್ನು ಕರೆದಿಲ್ಲ ಎಂದು ಬಿಜೆಪಿ ನಾಯಕರು ಹೇಳಿದಾಗ ಎದ್ದುನಿಂತು ಮಾತಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಸಿಸಿ ಪಾಟೀಲ್ ಅವರಿಗೆ ತಾನು ಸಿಎಂ ಕರೆದಿರುವ ವಿಷಯ ಹೇಳಿದಾಗ ಅವರು, ನಮ್ಮ ನಾಯಕರನ್ನು ಒಗ್ಗೂಡಿಸಬೇಕು, ಅವರೆಲ್ಲಿದ್ದಾರೆ ಅಂತ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದರು ಎಂದು ಸದನಕ್ಕೆ ತಿಳಿಸಿದರು.
ಬೆಳಗಾವಿ: ವಿಧಾನಸಭೆಯಲ್ಲಿ ಮಾತಾಡುವ ಅವಕಾಶ ಪಡೆದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್, ಪಂಚಮಸಾಲಿ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟ ಪಕ್ಷಾತೀತವಲ್ಲ, ಅದು ಬಿಜೆಪಿ ಪ್ರಾಯೋಜಿತ ಪ್ರತಿಭಟನೆ, ಪ್ರತಿಭಟನೆನಿರತ ಸ್ವಾಮೀಜಿಯವರನ್ನು ವಿಪಕ್ಷ ನಾಯಕ ಆರ್ ಅಶೋಕ ಮತ್ತು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದರು. ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಅಲ್ಪಸಂಖ್ಯಾತರ 4 ಪರ್ಸೆಂಟ್ ಮೀಸಲಾತಿ ರದ್ದು ಮಾಡಿ 2ಡಿ ಮತ್ತು 2ಸಿ ಎಂಬ ಹೊಸ ಪ್ರವರ್ಗವನ್ನು ಸೃಷ್ಟಿಸಿ ಶೇಕಡ 2 ಮೀಸಲಾತಿ ಪಂಚಮಸಾಲಿಗಳಿಗೆ ಮತ್ತು ಶೇಕಡ 2 ಮೀಸಲಾತಿ ಒಕ್ಕಲಿಗರಿಗೆ ನೀಡಿದ್ದರು, ಸರ್ವೋಚ್ಛ ನ್ಯಾಯಾಲಯ ಇದರ ವಿರುದ್ಧ ತಡೆಯಾಜ್ಞೆ ನೀಡಿತ್ತು ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಿಜಯಾನಂದ ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
Published on: Dec 12, 2024 05:30 PM
Latest Videos