Ahmedabad Plane Crash: ವೈದ್ಯ ಪ್ರತೀಕ್ ನೆನೆದು ಯಾದಗಿರಿಯ ಸ್ನೇಹಿತ ಭಾವುಕ

Edited By:

Updated on: Jun 13, 2025 | 1:52 PM

ಅಹಮದಾಬಾದ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ 265 ಜನ ಮೃತಪಟ್ಟಿದ್ದಾರೆ. ವೈದ್ಯ ಪ್ರತೀಕ್ ಜೋಶಿ ಮತ್ತು ಅವರ ಕುಟುಂಬ ಕೂಡ ಸಾವನ್ನಪಿದೆ. ಪ್ರತೀಕ್ ಜೊತೆ ಎಂಬಿಬಿಎಸ್ ಓದಿದ್ದ ಸ್ನೇಹಿತ ಡಾ. ಪ್ರಶಾಂತ್ ಬಾಸೂತ್ಕರ್ ಅವರ ಸಾವಿನ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಪ್ರತೀಕ್ ಇಂಗ್ಲೆಂಡ್‌ನಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದರು. ಪ್ರಶಾಂತ್ ಅವರು ಈ ದುರಂತದಿಂದ ತೀವ್ರ ಆಘಾತವಾಗಿದೆ ಎಂದಿದ್ದಾರೆ.

ಯಾದಗಿರಿ, ಜೂನ್​ 13: ಅಹಮದಾಬಾದ್​ ಏರ್​ಪೋರ್ಟ್ ಬಳಿ​ ವಿಮಾನ ದುರಂತದಲ್ಲಿ (Ahmedabad Plane Crash) ಬೆಳಗಾವಿ ಕೆಎಲ್ಇ ಕಾಲೇಜು ಹಳೇ ವಿದ್ಯಾರ್ಥಿಯಾಗಿದ್ದ ವೈದ್ಯ ಪ್ರತೀಕ್ ಜೋಶಿ ಕುಟುಂಬ ಕೂಡ ಸಾವನ್ನಪ್ಪಿದೆ. ಇತ್ತ ಪ್ರತೀಕ್ ನೆನೆದು ಯಾದಗಿರಿಯ ಸ್ನೇಹಿತ ಡಾ.ಪ್ರಶಾಂತ್ ಬಾಸೂತ್ಕರ್​ ಭಾವುಕರಾಗಿದ್ದಾರೆ. ಟಿವಿ9 ಜೊತೆ ಮಾತನಾಡಿದ ಅವರು, ಪ್ರತೀಕ್ ಜೋಶಿ ವೈದ್ಯರಾಗಿ ಇಂಗ್ಲೆಂಡ್​ನಲ್ಲೇ ವಾಸವಾಗಿದ್ದರು. ನಿನ್ನೆ ತಮ್ಮ ಕುಟುಂಬವನ್ನು ಕರೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ಈ ರೀತಿ ಘಟನೆ ನಡೆದಿದೆ. ಪ್ರತೀಕ್ ಮೃತಪಟ್ಟಿರುವ ಸುದ್ದಿ ತಿಳಿದು ತುಂಬಾ ನೋವಾಗಿದೆ. ಬೆಳಗಾವಿಯಲ್ಲಿ MBBS ಸ್ನೇಹಿತರು ಭೇಟಿಯಾಗಲು ನಿರ್ಧರಿಸಿದ್ದೆವು ಎಂದು ಹೇಳಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.