Video: ಮೂರು ವರ್ಷದ ಮಗುವಿನ ಮೇಲೆ ಕಾರು ಹತ್ತಿಸಿದ ಅಪ್ರಾಪ್ತ, ಕಾರಡಿಯಿಂದ ತೆವಳುತ್ತಾ ಬಂದ ಬಾಲಕಿ
ಅಪ್ರಾಪ್ತ ಬಾಲಕನೊಬ್ಬ ಮೂರು ವರ್ಷದ ಬಾಲಕಿ ಮೇಲೆ ಕಾರು ಹತ್ತಿಸಿರುವ ಘಟನೆ ಗುಜರಾತ್ನ ಅಹಮಾಬಾದ್ನಲ್ಲಿ ನಡೆದಿದೆ. ಅಹಮದಾಬಾದ್‌ನ ನೋಬಲ್‌ನಗರ ಪ್ರದೇಶದಲ್ಲಿ, ಮೂರು ವರ್ಷದ ಬಾಲಕಿಯ ಮೇಲೆ ಕಾರು ಹರಿದ ಆಘಾತಕಾರಿ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ, ಬಾಲಕಿ ವಾಹನದ ಕೆಳಗೆ ಬಿದ್ದ ನಂತರ ಬದುಕುಳಿದಿದೆ ಮತ್ತು ಎದ್ದು ಓಡಾಡಲು ಶುರು ಮಾಡಿತ್ತು.
ಅಹಮದಾಬಾದ್, ಅಕ್ಟೋಬರ್ 30: ಅಪ್ರಾಪ್ತ ಬಾಲಕನೊಬ್ಬ ಮೂರು ವರ್ಷದ ಬಾಲಕಿ ಮೇಲೆ ಕಾರು ಹತ್ತಿಸಿರುವ ಘಟನೆ ಗುಜರಾತ್ನ ಅಹಮಾಬಾದ್ನಲ್ಲಿ ನಡೆದಿದೆ. ಅಹಮದಾಬಾದ್‌ನ ನೋಬಲ್‌ನಗರ ಪ್ರದೇಶದಲ್ಲಿ, ಮೂರು ವರ್ಷದ ಬಾಲಕಿಯ ಮೇಲೆ ಕಾರು ಹರಿದ ಆಘಾತಕಾರಿ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ, ಬಾಲಕಿ ವಾಹನದ ಕೆಳಗೆ ಬಿದ್ದ ನಂತರ ಬದುಕುಳಿದಿದೆ ಮತ್ತು ಎದ್ದು ಓಡಾಡಲು ಶುರು ಮಾಡಿತ್ತು.
ಕಾರನ್ನು ಅಪ್ರಾಪ್ತ ಬಾಲಕನೊಬ್ಬ ಚಲಾಯಿಸುತ್ತಿದ್ದ ಎಂದು ವರದಿಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ಕಾರು ಮಾಲೀಕರ ವಿರುದ್ಧವೂ ತನಿಖೆ ಆರಂಭಿಸಿದ್ದಾರೆ. ಕಾರು ಮಗುವಿಗೆ ಡಿಕ್ಕಿ ಹೊಡೆದಿರುವುದನ್ನು ನೋಡಿದ ಸ್ಥಳೀಯರು ಕೂಗಿಕೊಂಡರು, ನಂತರ ಆತ ವಾಹನವನ್ನು ನಿಲ್ಲಿಸಿದನು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

