AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಎಐ ಕ್ಯಾಮರಾಗಳ ಸರಣಿ ಎಡವಟ್ಟು: ಬಿಎಂಟಿಸಿ ಬಸ್‌ಗಳಿಗೆ ಸೀಟ್‌ ಬೆಲ್ಟ್‌ ದಂಡ!

ಬೆಂಗಳೂರಿನಲ್ಲಿ ಎಐ ಕ್ಯಾಮರಾಗಳ ಸರಣಿ ಎಡವಟ್ಟು: ಬಿಎಂಟಿಸಿ ಬಸ್‌ಗಳಿಗೆ ಸೀಟ್‌ ಬೆಲ್ಟ್‌ ದಂಡ!

ಅರುಣ್ ಕುಮಾರ್​ ಆರ್​.
| Edited By: |

Updated on:Oct 17, 2026 | 2:48 PM

Share

ಬೆಂಗಳೂರಿನಲ್ಲಿ AI ಕ್ಯಾಮರಾಗಳ ಸರಣಿ ಎಡವಟ್ಟು ಮುಂದುವರಿದಿದೆ. ಮೂರು BMTC ಬಸ್‌ಗಳಿಗೆ ಚಾಲಕ ಸೀಟ್‌ ಬೆಲ್ಟ್‌ ಧರಿಸಿಲ್ಲ ಎಂದು ತಲಾ ₹500 ದಂಡ ವಿಧಿಸಲಾಗಿದೆ. ಈ ಹಿಂದೆ ಕಾರು ಚಾಲಕರಿಗೆ ಹೆಲ್ಮೆಟ್‌ ದಂಡ, ಬೈಕ್‌ನಲ್ಲಿ ಗಿಟಾರ್‌ಗೆ ಹೆಲ್ಮೆಟ್‌ ದಂಡ ವಿಧಿಸಿದ್ದಂತಹ ಘಟನೆಗಳು ಈ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷಗಳನ್ನು ಎತ್ತಿ ತೋರಿಸಿವೆ.

ಬೆಂಗಳೂರು, ಅಕ್ಟೋಬರ್ 17: ಬೆಂಗಳೂರಿನಲ್ಲಿ AI ಕ್ಯಾಮರಾಗಳ ಸರಣಿ ಎಡವಟ್ಟುಗಳು ಮುಂದುವರಿದಿದ್ದು, ಈ ಬಾರಿ ಬಿಎಂಟಿಸಿ ಬಸ್‌ಗಳಿಗೆ ಸೀಟ್‌ ಬೆಲ್ಟ್‌ ಉಲ್ಲಂಘನೆಗಾಗಿ ದಂಡ ವಿಧಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಮೂರು ಬೇರೆ ಬೇರೆ ಬಿಎಂಟಿಸಿ ಬಸ್‌ಗಳಿಗೆ, ಚಾಲಕ ಸೀಟ್‌ ಬೆಲ್ಟ್‌ ಧರಿಸಿಲ್ಲ ಎಂಬ ಕಾರಣಕ್ಕೆ ತಲಾ 500 ರೂಪಾಯಿ ದಂಡ ವಿಧಿಸಲಾಗಿದೆ. ವಿಧಾನಸೌಧ ಬಳಿ ಸಿಗ್ನಲ್‌ನಲ್ಲಿ ನಿಂತಿದ್ದ ಬಸ್‌ಗೂ ಹಾಗೂ ಹೆಣ್ಣೂರು ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್‌ಗಳಿಗೂ ಈ ದಂಡ ಬಿದ್ದಿದೆ ಎಂದು ವರದಿಯಾಗಿದೆ.

BMTC ಬಸ್‌ ಚಾಲಕ ಸೀಟ್‌ ಬೆಲ್ಟ್‌ ಧರಿಸಿಲ್ಲ ಎಂಬ ಆರೋಪ ನಗೆಪಾಟಲಿಗೆ ಕಾರಣವಾಗಿದೆ. ಇದು AI ಕ್ಯಾಮರಾಗಳಿಂದ ನಡೆದ ಮೊದಲ ಎಡವಟ್ಟಲ್ಲ. ಈ ಹಿಂದೆ, ಕಾರು ಚಾಲಕನಿಗೆ ಹೆಲ್ಮೆಟ್‌ ಧರಿಸಿಲ್ಲ ಎಂದು ದಂಡ ವಿಧಿಸಲಾಗಿತ್ತು. ಮತ್ತೊಂದು ಘಟನೆಯಲ್ಲಿ, ಬೈಕ್ ಸವಾರನ ಹಿಂದೆ ಗಿಟಾರ್‌ ಬ್ಯಾಗ್ ಇದ್ದರೂ, ಅದನ್ನು ಹಿಂಬದಿ ಸವಾರ ಎಂದು ಪರಿಗಣಿಸಿ ಹೆಲ್ಮೆಟ್‌ ಧರಿಸಿಲ್ಲ ಎಂದು ದಂಡ ಹಾಕಲಾಗಿತ್ತು. ಈ ಘಟನೆಗಳು AI ಕ್ಯಾಮರಾ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷಗಳನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತಿವೆ. ಪದೇ ಪದೇ ಇಂತಹ ತಪ್ಪು ದಂಡಗಳು ಸಾರ್ವಜನಿಕರಿಗೆ ಅನಗತ್ಯ ತೊಂದರೆಗಳನ್ನು ಉಂಟುಮಾಡುತ್ತಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 17, 2026 02:48 PM

Follow Us
ಅರುಣ್ ಕುಮಾರ್​ ಆರ್​.
ಅರುಣ್ ಕುಮಾರ್​ ಆರ್​.

ಅರುಣ್ ಕುಮಾರ್ ಆರ್. ಬೆಂಗಳೂರಿನ ಜ್ಞಾನಭಾರತಿ ವಿವಿಯಲ್ಲಿ ಸಮೂಹ ಸಂವಹನ ಹಾಗೂ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಟಿವಿ9 ಕನ್ನಡದಲ್ಲಿ ಮೆಟ್ರೋ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಜಿಬಿಎ ಹಾಗೂ ನಗರದ ಅಭಿವೃದ್ಧಿ ಕ್ಷೇತ್ರದಲ್ಲಿ ಒಂದು ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಇವರು, ಒಟ್ಟು 2 ವರ್ಷಗಳ ವರದಿಗಾರಿಕೆ ಅನುಭವದೊಂದಿಗೆ ಜನೋಪಯೋಗಿ ವಿಷಯಗಳ ಕುರಿತು ವರದಿ ಮಾಡುತ್ತಿದ್ದಾರೆ.

Read More