ಲಕ್ಷ್ಮಣ ಸವದಿ ಮನೆಗೆ ಉಪಹಾರಕ್ಕೆ ಬಂದ ರಂದೀಪ್ ಸುರ್ಜೆವಾಲಾ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಭಾಷಣ ಚೆನ್ನಾಗಿತ್ತು ಎಂದರು!

|

Updated on: Apr 25, 2024 | 12:26 PM

ಅವರೆಲ್ಲ ನೇರವಾಗಿ ಡೈನಿಂಗ್ ಹಾಲ್ ಗೆ ಹೋಗುವಾಗ ಸುರ್ಜೇವಾಲಾ, ಲಕ್ಷ್ಮೀ ಜೀ ನಿನ್ನೆ ನಿಮ್ಮ ಭಾಷಣವೊಂದನನ್ನು ಕೇಳಿದೆ ಅಂತ ಹಿಂದಿಯಲ್ಲಿ ಹೇಳುತ್ತಾರೆ. ಯಾವ ಭಾಷಣ ಸರ್ ಅಂತ ಸಚಿವೆ ಹಿಂದಿಯಲ್ಲೇ ಕೇಳುತ್ತಾರೆ. ನಂತರ ಅವರ ನಡುವೆ ನಡೆಯುವ ಸಂಭಾಷಣೆ ಅಸ್ಪಷ್ಟವಾಗಿ ಕೇಳಿಸುತ್ತದೆ. ಡೈನಿಂಗ್ ಟೇಬಲ್ ಬಳಿ ಬಂದಾಗ ಪಕ್ಕದ ಕುರ್ಚಿಯಲ್ಲಿ ಕೂರಲು ಹೋಗುವ ಸುರ್ಜೆವಾಲಾರ ಕೈ ಹಿಡಿಯುವ ಸವದಿ, ಮನೆಯ ಯಜಮಾನ ಕೂರುವ ಕುರ್ಚಿಯಲ್ಲಿ ಕೂರಿಸುತ್ತಾರೆ.

ಬೆಳಗಾವಿ: ನಗರದ ಸದಾಶಿವನಗರಲ್ಲಿ ಅಥಣಿ ಶಾಸಕ ಲಕ್ಷ್ಮಣ ಸವದಿಯವರು (Laxman Savadi) ಅರಮನೆಯಂತೆ ಕಟ್ಟಿಸಿಕೊಂಡಿರುವ ಮನೆಗೆ ಇಂದು ಬೆಳಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೆವಾಲಾ (Randeep Singh Surjewala) ಬೆಳಗಿನ ಉಪಹಾರಕ್ಕಾಗಿ ಆಗಮಿಸಿದರು. ಪ್ರವೇಶ ದ್ವಾರದ ಹೊರಗೆ ಅವರಿಗಾಗಿ ಕಾಯುತ್ತಿದ್ದ ಸವದಿಯವರು ಬೋಕೆ ನೀಡಿ ಸ್ವಾಗತಿಸಿದರು. ಸ್ಥಳೀಯರೇ ಆಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಸಹ ಸವದಿ ಮನೆಯಲ್ಲಿದ್ದರು. ಅವರನ್ನು ನೋಡಿದಾಕ್ಷಣ ಸುರ್ಜೇವಾಲಾ ನಮಸ್ತಾರ ಲಕ್ಷ್ಮೀ ಜೀ, ಹೇಗಿದ್ದೀರಿ ಅಂತ ಇಂಗ್ಲಿಷ್ ನಲ್ಲಿ ಕೇಳಿದಾಗ ಸಚಿವೆ ಗುಡ್ ಅಂತ ಉತ್ತರಿಸುತ್ತಾರೆ. ನಂತರ ಅವರೆಲ್ಲ ನೇರವಾಗಿ ಡೈನಿಂಗ್ ಹಾಲ್ ಗೆ ಹೋಗುವಾಗ ಸುರ್ಜೇವಾಲಾ, ಲಕ್ಷ್ಮೀ ಜೀ ನಿನ್ನೆ ನಿಮ್ಮ ಭಾಷಣವೊಂದನನ್ನು ಕೇಳಿದೆ ಅಂತ ಹಿಂದಿಯಲ್ಲಿ ಹೇಳುತ್ತಾರೆ. ಯಾವ ಭಾಷಣ ಸರ್ ಅಂತ ಸಚಿವೆ ಹಿಂದಿಯಲ್ಲೇ ಕೇಳುತ್ತಾರೆ. ನಂತರ ಅವರ ನಡುವೆ ನಡೆಯುವ ಸಂಭಾಷಣೆ ಅಸ್ಪಷ್ಟವಾಗಿ ಕೇಳಿಸುತ್ತದೆ. ಡೈನಿಂಗ್ ಟೇಬಲ್ ಬಳಿ ಬಂದಾಗ ಪಕ್ಕದ ಕುರ್ಚಿಯಲ್ಲಿ ಕೂರಲು ಹೋಗುವ ಸುರ್ಜೆವಾಲಾರ ಕೈ ಹಿಡಿಯುವ ಸವದಿ, ಮನೆಯ ಯಜಮಾನ ಕೂರುವ ಕುರ್ಚಿಯಲ್ಲಿ ಕೂರಿಸುತ್ತಾರೆ. ಲಕ್ಷ್ಮಿ ಸಹೋದರ ಮತ್ತು ವಿಧಾನ ಪರಿಷತ್ ಸದಸ್ಯ ಚೆನ್ನರಾಜ್ ಹಟ್ಟಿಹೊಳಿ ಅವರನ್ನು ಸಹ ಸವದಿ ಮನೆಯಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Who would be CM? ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಮನಸ್ತಾಪವಿಲ್ಲ, ಸೌಹಾರ್ದಯುತ ಬಾಂಧವ್ಯವಿದೆ: ರಂದೀಪ್ ಸುರ್ಜೆವಾಲಾ