AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡಿಶಾದ ರೂರ್ಕೆಲಾ ವಾಯುನೆಲೆಯಲ್ಲಿ ವಿಮಾನ ಅಪಘಾತ; ಪೈಲಟ್ ಸೇರಿದಂತೆ 6 ಜನರಿಗೆ ಗಾಯ

ಒಡಿಶಾದ ರೂರ್ಕೆಲಾ ವಾಯುನೆಲೆಯಲ್ಲಿ ವಿಮಾನ ಅಪಘಾತ; ಪೈಲಟ್ ಸೇರಿದಂತೆ 6 ಜನರಿಗೆ ಗಾಯ

ಸುಷ್ಮಾ ಚಕ್ರೆ
|

Updated on: Jan 10, 2026 | 4:42 PM

Share

ಭುವನೇಶ್ವರದಿಂದ ರೂರ್ಕೆಲಾಗೆ ಹಾರುತ್ತಿದ್ದ 9 ಆಸನಗಳ ವಿಮಾನವು ಟೇಕ್ ಆಫ್ ಆದ ಸುಮಾರು 10 ಕಿಲೋಮೀಟರ್ ದೂರದಲ್ಲಿ ತೊಂದರೆ ಅನುಭವಿಸಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು ಎಂದು ವರದಿಯಾಗಿದೆ. ಈ ವಿಮಾನದಲ್ಲಿ 6 ಜನರಿದ್ದರು. 4 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಇದ್ದರು. ಕ್ಯಾಪ್ಟನ್ ನವೀನ್ ಕಡಂಗ ಮತ್ತು ಕ್ಯಾಪ್ಟನ್ ತರುಣ್ ಶ್ರೀವಾಸ್ತವ ಎಂದು ಗುರುತಿಸಲಾಗಿದೆ.

ನವದೆಹಲಿ, ಜನವರಿ 10: ಒಡಿಶಾದ (Odisha) ರೂರ್ಕೆಲಾ ವಾಯುನೆಲೆಯಿಂದ 9 ಕಿಲೋಮೀಟರ್ ದೂರದಲ್ಲಿ ಸಣ್ಣ ವಿಮಾನವೊಂದರಲ್ಲಿ ಹಾರಾಟದ ವೇಳೆ ತಾಂತ್ರಿಕ ದೋಷ ಕಂಡುಬಂದ ನಂತರ ತುರ್ತು ಭೂಸ್ಪರ್ಶ ಮಾಡಿದೆ. ಈ ಘಟನೆಯಲ್ಲಿ ಪೈಲಟ್ ಸೇರಿದಂತೆ 6 ಜನರು ಗಾಯಗೊಂಡಿದ್ದಾರೆ. ಭುವನೇಶ್ವರದಿಂದ ರೂರ್ಕೆಲಾಗೆ ಹಾರುತ್ತಿದ್ದ 9 ಆಸನಗಳ ವಿಮಾನ ಇದಾಗಿತ್ತು. ಈ ವಿಮಾನದಲ್ಲಿ 4 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಇದ್ದರು. ಅವರನ್ನು ಕ್ಯಾಪ್ಟನ್ ನವೀನ್ ಕಡಂಗ ಮತ್ತು ಕ್ಯಾಪ್ಟನ್ ತರುಣ್ ಶ್ರೀವಾಸ್ತವ ಎಂದು ಗುರುತಿಸಲಾಗಿದೆ. ಅವರೆಲ್ಲರಿಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More