ಚೈತ್ರಾ, ತ್ರಿವಿಕ್ರಮ್ ನಂಟಿನ ಬಗ್ಗೆ ಗುಸುಗುಸು ಮಾತಾಡಿದ ಐಶ್ವರ್ಯಾ, ಸುರೇಶ್

|

Updated on: Nov 07, 2024 | 8:09 PM

‘ಬಿಗ್ ಬಾಸ್ ಕನ್ನಡ ಸೀಸನ್​ 11’ ರಿಯಾಲಿಟಿ ಶೋನಲ್ಲಿ ಆಟದ ತೀವ್ರತೆ ಹೆಚ್ಚಾಗುತ್ತಿದೆ. ಒಬ್ಬರ ಬಗ್ಗೆ ಇನ್ನೊಬ್ಬರು ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ಎಲ್ಲರ ವ್ಯಕ್ತಿತ್ವ ಏನು ಎಂಬುದು ಬಹುತೇಕ ಗೊತ್ತಾಗಿದೆ. ಚೈತ್ರಾ ಕುಂದಾಪುರ ಮತ್ತು ತ್ರಿವಿಕ್ರಮ್ ಅವರ ನಡುವಿನ ನಂಟಿನ ಬಗ್ಗೆ ಐಶ್ವರ್ಯಾ ಹಾಗೂ ಗೋಲ್ಡ್ ಸುರೇಶ್ ಅವರು ಮಾತನಾಡಿಕೊಂಡಿದ್ದಾರೆ.

ಚೈತ್ರಾ ಕುಂದಾಪುರ ಅವರು ತ್ರಿವಿಕ್ರಮ್​ಗೆ ಮೌತ್​ಪೀಸ್ ಆಗಿದ್ದಾರೆ ಎಂದು ಐಶ್ವರ್ಯಾ ಸಿಂಧೋಗಿ ಅವರು ಹೇಳಿದ್ದಾರೆ. ಈ ಮಾತು ಕೇಳಿ ಗೋಲ್ಡ್ ಸುರೇಶ್ ಅವರು ಹೌದು ಎಂದು ತಲೆ ಅಲ್ಲಾಡಿಸಿದ್ದಾರೆ. ‘ಈಗಲೂ ಹಾಗೆಯೇ ಇದ್ದಾರೆ’ ಎಂದು ಸುರೇಶ್ ಹೇಳಿದ್ದಾರೆ. ಮಾತಿನಿಂದಲೇ ಚೈತ್ರಾ ಕುಂದಾಪುರ ಅನೇಕ ಬಾರಿ ಎಡವಟ್ಟು ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಆಟ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕು. ನವೆಂಬರ್​ 7ರ ಸಂಚಿಕೆಯ ಪ್ರೋಮೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.