ಸ್ವರ್ಗದಲ್ಲಿ ದೇವರಿಗೂ ಅವರು ಹಾಡು ಕೇಳಿಸ್ತಾರೆ ಎಂದ ಅಕ್ಕಿನೇನಿ ನಾಗಾರ್ಜುನ

| Updated By: ರಾಜೇಶ್ ದುಗ್ಗುಮನೆ

Updated on: Dec 01, 2021 | 7:46 PM

ಇಂದು (ಡಿಸೆಂಬರ್​ 1) ಅವರ ಅಂತ್ಯಕ್ರಿಯೆ ಪೂರ್ಣಗೊಂಡಿದೆ. ಅವರನ್ನು ಕಳೆದುಕೊಂಡು ಚಿತ್ರರಂಗ ಶಾಕ್​ಗೆ ಒಳಗಾಗಿದೆ. ಅವರನ್ನು ಕಳೆದುಕೊಂಡಿರುವ ಬಗ್ಗೆ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಅವರು ಮಾತನಾಡಿದ್ದಾರೆ.

ತೆಲುಗಿನ ಖ್ಯಾತ ಗೀತ ಸಾಹಿತಿ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ಅವರು ಮಂಗಳವಾರ (ನವೆಂಬರ್​ 30) ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರು ಸಿಕಂದರಾಬಾದ್‌ನ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 3,000ಕ್ಕೂ ಅಧಿಕ ಹಾಡುಗಳಿಗೆ ಸಾಹಿತ್ಯ ಬರೆದಿರುವ ಸೀತಾರಾಮ ಶಾಸ್ತ್ರಿಗಳಿಗೆ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ಬಂದಿತ್ತು. 12 ಬಾರಿ ನಂದಿ ಪ್ರಶಸ್ತಿ, 4 ಫಿಲ್ಮ್ ಫೇರ್ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇಂದು (ಡಿಸೆಂಬರ್​ 1) ಅವರ ಅಂತ್ಯಕ್ರಿಯೆ ಪೂರ್ಣಗೊಂಡಿದೆ. ಅವರನ್ನು ಕಳೆದುಕೊಂಡು ಚಿತ್ರರಂಗ ಶಾಕ್​ಗೆ ಒಳಗಾಗಿದೆ. ಅವರನ್ನು ಕಳೆದುಕೊಂಡಿರುವ ಬಗ್ಗೆ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಅವರು ಮಾತನಾಡಿದ್ದಾರೆ. ಈ ವೇಳೆ ಅವರು ತುಂಬಾನೇ ಭಾವುಕರಾಗಿದ್ದರು. ಅವರು ಹೇಳಿದ್ದೇನು ಎನ್ನುವುದಕ್ಕೆ ವಿಡಿಯೋ ನೋಡಿ.

ಇದನ್ನೂ ಓದಿ: Sirivennela Seetharama Sastry: ಪದ್ಮಶ್ರೀ ಪುರಸ್ಕೃತ ಸಾಹಿತಿ, ಖ್ಯಾತ ಗೀತ ರಚನೆಕಾರ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ಇನ್ನಿಲ್ಲ

Follow us on