AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಇಂದು ಅಕ್ಷಯ ತೃತೀಯ ಆಚರಣೆ ವಿಧಾನ ಹೇಗೆ ನೋಡಿ!

Daily Devotional: ಇಂದು ಅಕ್ಷಯ ತೃತೀಯ ಆಚರಣೆ ವಿಧಾನ ಹೇಗೆ ನೋಡಿ!

ಭಾವನಾ ಹೆಗಡೆ
|

Updated on: Apr 20, 2026 | 6:46 AM

Share

ಇಂದು ಅಕ್ಷಯ ತೃತೀಯ ಆಚರಣೆ ವಿಧಾನ ಹೇಗೆ ಎಂಬುದನ್ನು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ನಾವು ಹುಟ್ಟಿದ ಕ್ಷಣದಿಂದ ಸಾವಿನವರೆಗೂ ದೇವರ ಅನುಗ್ರಹ, ತಂದೆ-ತಾಯಿಗಳ ಆಶೀರ್ವಾದದ ಜೊತೆಗೆ, ಗುರುವಿನ ಅನುಗ್ರಹವು ಅತ್ಯಂತ ಮಹತ್ವದ್ದಾಗಿದೆ. "ಹರ ಮುನಿದರೂ ಗುರು ಕಾಯುವನು" ಎಂಬ ನುಡಿಯು ಗುರುವಿನ ಸರ್ವೋಚ್ಚ ಸ್ಥಾನವನ್ನು ಸಾರುತ್ತದೆ.

ಇಂದು ಅಕ್ಷಯ ತೃತೀಯ ಆಚರಣೆ ವಿಧಾನ ಹೇಗೆ ಎಂಬುದನ್ನು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ನಾವು ಹುಟ್ಟಿದ ಕ್ಷಣದಿಂದ ಸಾವಿನವರೆಗೂ ದೇವರ ಅನುಗ್ರಹ, ತಂದೆ-ತಾಯಿಗಳ ಆಶೀರ್ವಾದದ ಜೊತೆಗೆ, ಗುರುವಿನ ಅನುಗ್ರಹವು ಅತ್ಯಂತ ಮಹತ್ವದ್ದಾಗಿದೆ. “ಹರ ಮುನಿದರೂ ಗುರು ಕಾಯುವನು” ಎಂಬ ನುಡಿಯು ಗುರುವಿನ ಸರ್ವೋಚ್ಚ ಸ್ಥಾನವನ್ನು ಸಾರುತ್ತದೆ.

ಇತಿಹಾಸದ ಪ್ರಕಾರ, ಇದು ತ್ರೇತಾಯುಗ ಆರಂಭವಾದ ದಿನ, ಪಾಂಡವರಿಗೆ ಅಕ್ಷಯ ಪಾತ್ರೆ ದೊರೆತ ದಿನ, ಕುಬೇರನಿಗೆ ಮಹಾಲಕ್ಷ್ಮಿ ಒಲಿದ ದಿನ, ಪರಶುರಾಮ ಜಯಂತಿ ಮತ್ತು ಗಂಗೆ ಭೂಮಿಗೆ ಇಳಿದ ದಿನವಾಗಿದೆ. ಮಹಾಭಾರತದ ರಚನೆಯೂ ಇದೇ ದಿನ ಪ್ರಾರಂಭವಾಯಿತು. ಈ ದಿನ ಅನ್ನದಾನ, ವಸ್ತ್ರದಾನ, ಜಲದಾನಗಳು ಅತ್ಯಂತ ಶುಭಪ್ರದ. ಯಾವುದೇ ಹೊಸ ಕಾರ್ಯ, ಗೃಹಪ್ರವೇಶ ಅಥವಾ ವಿವಾಹಕ್ಕೆ ಈ ದಿನ ಶುಭಪ್ರದವಾಗಿದ್ದು, ಯಾವುದೇ ದೋಷವಿರುವುದಿಲ್ಲ. ಶುಭ ಮುಹೂರ್ತಗಳಲ್ಲಿ ಪೂಜೆ ಸಲ್ಲಿಸಿ, ಸಾಲ ಮಾಡದೆ ಶಕ್ತ್ಯಾನುಸಾರ ದಾನ ಕಾರ್ಯಗಳನ್ನು ಕೈಗೊಳ್ಳುವುದು ಉತ್ತಮ ಎಂದು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.

 

Follow Us