Loading video

ನನ್ನಲ್ಲಿಗೆ ಬಂದ ಎಲ್ಲ ರಾಜಕಾರಣಿಗಳಿಗೆ ಸಹಾಯ ಮಾಡಿದ್ದೇನೆ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ

Updated on: Apr 14, 2025 | 6:32 PM

ಜಾತಿ ಗಣತಿ ಅವೈಜ್ಞಾನಿಕವಾಗಿದೆ ಅಂತ ಮೊದಲಿಂದ ಹೇಳುತ್ತಿದ್ದೇನೆ, ನಮ್ಮ ಮಠಕ್ಕೆ ಯಾರೂ ಸರ್ವೆಗೆ ಬಂದಿಲ್ಲ ಎಂದು ಸಿದ್ದಗಂಗಾ ಮಠದ ಶ್ರೀಗಳೇ ಹೇಳಿದ್ದಾರೆ, ತಮಗಿರುವ ಮಾಹಿತಿ ಪ್ರಕಾರ ಪಂಚಮಸಾಲಿಗಳ ಸಂಖ್ಯೆ 1.30 ಕೋಟಿ, ಆದರೆ ಜಾತಿ ಗಣತಿ ವರದಿಯಲ್ಲಿ ಕೇವಲ 16 ಲಕ್ಷ ಅಂತಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತೊಮ್ಮೆ ಗಣತಿ ಮಾಡಿಸಬೇಕಾದ ಅವಶ್ಯಕತೆಯಿದೆ ಎಂದು ಸ್ವಾಮೀಜಿ ಹೇಳಿದರು.

ಬಾಗಲಕೋಟೆ, ಏಪ್ರಿಲ್ 14: ರಾಜಕಾರಣಿಗಳು ಕೇವಲ ತಮ್ಮ ರಾಜಕೀಯ ತೆವಲಿಗೋಸ್ಕರ ಮಠಾಧೀಶರನ್ನು (seers) ಮತ್ತು ಸಮಾಜವನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪಕ್ಕೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ ಕೂಡಲಸಂಗಮ ಮಠಾಧೀಶ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು, ರಾಜಕಾರಣಿಗಳು ಮಠಾಧಿಪತಿಗಳ ಬಗ್ಗೆ ಇಟ್ಟುಕೊಂಡಿರುವ ಧೋರಣೆ ಬಗ್ಗೆ ಗೊತ್ತಿಲ್ಲ ಅದರೆ ತಮ್ಮಲ್ಲಿಗೆ ಬರುವ ಎಲ್ಲರಿಗೂ ತಾವು ಸಹಾಯ ಮಾಡಿ ಸಹಕಾರ ನೀಡಿದ್ದೇವೆ, ತಮ್ಮ ಸಹಾಯವನ್ನು ಸದುಪಯೋಗ ಮಾಡಿಕೊಂಡಿದ್ದರೆ ಎಲ್ಲರಿಗೂ ಒಳ್ಳೆಯದು, ದುರುಪಯೋಗ ಮಾಡಿಕೊಂಡಿದ್ದರೆ ಅದನ್ನು ಭಗವಂತ ನೋಡಿಕೊಳ್ಳುತ್ತಾನೆ ಎಂದು ಹೇಳಿದರು.

ಇದನ್ನೂ ಓದಿ:  ಯತ್ನಾಳ್​ಗೆ ಬೆಂಬಲ: ಜಯಮೃತ್ಯುಂಜಯ ಸ್ವಾಮೀಜಿಗೆ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಎಚ್ಚರಿಕೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ