Karnataka Assembly Polls: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ದಿನದ ತಯಾರಿಗಳ ಕೊನೆಹಂತ

|

Updated on: May 09, 2023 | 12:22 PM

ಮತದಾನ ದಿನದ ಕರ್ತವ್ಯಗಳಿಗೆ ನೇಮಕವಾಗಿರುವ ಸಿಬ್ಬಂದಿಗೆ ಅವರಿಗೆ ನಿಯೋಜಿಸಲಾಗಿರುವ ಮತಟ್ಟೆಗಳಿಗೆ ಕಳಿಸುವ ಮೊದಲು ಮತ್ತೊಮ್ಮೆ ಒಂದು ಸಂಕ್ಷಿಪ್ತ ತರಬೇತಿ ನೀಡಲಾಗುವುದು.

ಬೆಳಗಾವಿ: ವಿಧಾನಸಣಾ ಚುನಾವಣೆ ಅಂಗವಾಗಿ ನಾಳೆ ರಾಜ್ಯದೆಲ್ಲೆಡೆ ಮತದಾನ (voting) ನಡೆಯಲಿದ್ದು ಸಕಲ ಸಿದ್ಥತೆಗಳನ್ನು ಮಾಡಿಕೊಳ್ಳಲಾಗಿದೆ. ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದೆನಿಸಿರುವ ಬೆಳಗಾವಿ ಗ್ರಾಮೀಣ (Belagavi Rural) ಕ್ಷೇತ್ರದಲ್ಲಿನ ತಯಾರಿಗಳ ಬಗ್ಗೆ ಟಿವಿ9 ಕನ್ನಡ ವಾಹಿನಿ ವರದಿಗಾರ ಈ ರಿಪೋರ್ಟ್ ಕಳಿಸಿದ್ದಾರೆ. ವಿಡಿಯೋದಲ್ಲಿ ಕಾಣುವ ಹಾಗೆ ಮತದಾನದ ದಿನ ಅವಶ್ಯವಿರುವ ಹಲವಾರು ಸಾಮಗ್ರಿಗಳನ್ನು ಇಲ್ಲಿ ನೋಡಬಹುದು. ಬ್ಯಾಲೆಟ್ ಯುನಿಟ್, ಇಂಡೆಲಿಬಲ್ ಇಂಕ್, ಸ್ಪೆಷಲ್ ಟ್ಯಾಗ್, ಕಂಟ್ರೋಲ್ ಯುನಿಟ್, ಅಡ್ರೆಸ್ ಟ್ಯಾಗ್ (address tag) ಮೊದಲಾದ ಸಾಮಗ್ರಿಗಳನ್ನು ಸಿದ್ಧಮಾಡಿ ಇಡಲಾಗಿದೆ. ಮತದಾನ ದಿನದ ಕರ್ತವ್ಯಗಳಿಗೆ ನೇಮಕವಾಗಿರುವ ಸಿಬ್ಬಂದಿಗೆ ಅವರಿಗೆ ನಿಯೋಜಿಸಲಾಗಿರುವ ಮತಟ್ಟೆಗಳಿಗೆ ಕಳಿಸುವ ಮೊದಲು ಮತ್ತೊಮ್ಮೆ ಒಂದು ಸಂಕ್ಷಿಪ್ತ ತರಬೇತಿ ನೀಡಲಾಗುವುದು ಎಂದು ಮೇಲ್ವಿಚರಾಣೆ ಸಿಬ್ಬಂದಿಯೊಬ್ಬರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ