Karnataka Assembly Polls: ನಾಳೆ ರಜಾ ಅಂತ ಮತದಾನ ಮಾಡದೆ ಪ್ರವಾಸಿ ತಾಣಗಳಿಗೆ ಹೋಗುವವರಿಗೆ ಕಾದಿದೆ ನಿರಾಶೆ, ನೋ ಮತದಾನ ನೋ ಎಂಟ್ರಿ!
ಪರರಾಜ್ಯದವರಿಗೆ ಮತ್ತು ಮತದಾನ ಮಾಡಿ ಬಂದವರಿಗೆ ಈ ಷರತ್ತು ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ ಹೆಚ್ ಎನ್ ಗೋಪಾಲಕೃಷ್ಣ ಹೇಳುತ್ತಾರೆ.
ಮಂಡ್ಯ: ನಾಳೆ ಮತದಾನದ ದಿನ ಹಾಗಾಗಿ ಶಾಲಾ ಕಾಲೇಜು ಮತ್ತು ಕಚೇರಿಗಳಿಗೆ ರಜೆ (holiday). ಬಹಳಷ್ಟು ಅರ್ಹ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದೆ (exercise their franchise) ಕುಟುಂಬಗಳ ಜೊತೆ ಪ್ರವಾಸಿ ತಾಣಗಳಿಗೆ ಹೋಗುತ್ತಾರೆ. ಅದನ್ನು ತಡೆಯಲೆಂದೇ ಮಂಡ್ಯ ಜಿಲ್ಲಾಡಳಿತ (Mandya district administration) ಒಂದು ಉಪಾಯ ಹೂಡಿದೆ. ಜಿಲ್ಲೆಯಲ್ಲಿರುವ ಪ್ರವಾಸಿಗಳು ಹೇರಳ. ಬೇಸಿಗೆ ರಜೆ ಮತ್ತು ಚುನಾವಣಾ ರಜೆ ನಿಮಿತ್ತ ಜನ ತಂಡತಂಡಗಳಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ, ಅದರೆ, ನಾಳೆ ಮತದಾನ ಮಾಡಿದ ಪುರಾವೆ ತೋರಿಸಿದವರಿಗೆ ಮಾತ್ರ ತಾಣದೊಳಗೆ ಹೋಗಲು ಅನುಮತಿ ನೀಡಲಾಗುತ್ತದೆ. ಪರರಾಜ್ಯದವರಿಗೆ ಮತ್ತು ಮತದಾನ ಮಾಡಿ ಬಂದವರಿಗೆ ಈ ಷರತ್ತು ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ ಹೆಚ್ ಎನ್ ಗೋಪಾಲಕೃಷ್ಣ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos