Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ

ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ

TV9 Web
| Updated By: ಸುಷ್ಮಾ ಚಕ್ರೆ

Updated on: Nov 27, 2024 | 9:28 PM

ನಾನು ಹಿಂದೂ ವಿರೋಧಿ ಎಂದು ಹಲವರು ಆರೋಪಿಸುತ್ತಾರೆ. ಯಾವ ಧರ್ಮ ಕೂಡ ದ್ವೇಷವನ್ನು ಭೋದನೆ ಮಾಡುವುದಿಲ್ಲ. ಧರ್ಮಕ್ಕೆ ವಿಶೇಷ ಅರ್ಥ ಹುಡುಕಬಾರದು. ದಯೆಯೇ ಧರ್ಮದ ಮೂಲವಯ್ಯ ಎಂದು ಬಸವಣ್ಣ ವಚನದಲ್ಲಿ ತಿಳಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬಳ್ಳಾರಿ: ಯಾರ ಮೇಲೂ ದ್ವೇಷ, ಅಸೂಯೆ ಇರಬಾರದು. ದ್ವೇಷ, ಅಸೂಯೆಯಿದ್ದರೆ ಸಮಾಜ ಇಬ್ಭಾಗವಾಗುತ್ತದೆ. ಅಂಬೇಡ್ಕರ್ ನಿಮ್ಮ ಧರ್ಮ ಪಾಲಿಸಿ, ಆದರೆ ಬೇರೆ ಧರ್ಮದ ಬಗ್ಗೆ ಸಹಿಷ್ಣುತೆ ಇರಲಿ ಎಂದಿದ್ದಾರೆ. ಅದಕ್ಕೆ ಕುವೆಂಪು ಅವರು ಸರ್ವಜನಾಂಗದ ತೋಟ ಮಾಡಬೇಕು ಎಂದಿದ್ದಾರೆ. ಕೆಲವರು ಸಿದ್ದರಾಮಯ್ಯ ಮುಸಲ್ಮಾನರನ್ನು, ಕ್ರಿಶ್ಚಿಯನ್​ರನ್ನು ಓಲೈಸಿ, ಹಿಂದುಗಳನ್ನು ವಿರೋಧಿಸ್ತಾರೆ ಅಂತಾರೆ. ಅದೆಲ್ಲ ಸುಳ್ಳು ನಾನು ಎಲ್ಲರನ್ನೂ ಪ್ರೀತಿಸುತ್ತೇನೆ. ತಾರತಮ್ಯ, ಅಸಮಾನತೆ ನಮ್ಮಲ್ಲಿರುವ ಜಾತೀಯತೆಯಿಂದ ಬಂದಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ