ಪುನೀತ್ ಕೆರೆಹಳ್ಳಿ ಮೇಲೆ ಹಲ್ಲೆ ಆರೋಪ: ಎಸಿಪಿ ವಿರುದ್ಧ ದೂರು, ಪ್ರತಾಪ್ ಸಿಂಹ ಹೇಳಿದ್ದಿಷ್ಟು!

|

Updated on: Jul 31, 2024 | 3:10 PM

ಹಿಂದೂ ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಎಸಿಪಿ ವಿರುದ್ದ ದೂರು ದಾಖಲಾಗಿದ್ದು, ಈ ಕುರಿತು ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ‘ ಘಟನೆ ವೇಳೆ ಬಂದಂತಹ ಅಬ್ದುಲ್​ ರಜಾಕ್​ ಮೇಲೆ ಯಾವುದೇ ಕೇಸ್​ ದಾಖಲಿಸಲ್ಲ. ಆದರೆ, ಸಾರ್ವಜನಿಕರ ಹಿತದೃಷ್ಟಿಯಿಂದ ಅಲ್ಲಿಗೆ ಹೋದವರನ್ನ ಠಾಣೆಗೆ ಕರೆದುಕೊಂಡು ಬಂದು ಹಲ್ಲೆ ಮಾಡ್ತೀರಾ ಎಂದು ಪೊಲೀಸ್​ ವಿರುದ್ದ ಕಿಡಿಕಾರಿದರು.

ಬೆಂಗಳೂರು, ಜು.31: ಹಿಂದೂ ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿ(Puneeth kerehalli) ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಎಸಿಪಿ ಚಂದನ್ ಕುಮಾರ್ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ, ಪುನೀತ್ ಕೆರೆಹಳ್ಳಿ ಹಾಗೂ ಶಾಸಕ ಹರೀಶ್ ಪೂಂಜಾ ಅವರು ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಅವರ ಬಳಿ ದೂರು ನೀಡಿದ್ದಾರೆ. ಈ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ‘ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ ಮೇಲೆ ಎಸಿಪಿ ಚಂದನ್ ಕುಮಾರ್​ರಿಂದ ಹಲ್ಲೆ ಕೇಸ್ ದಾಖಲಿಸಿದ್ದೇವೆ. ಪೊಲೀಸರೇ ಲೋಪ ಎಸಗಿದಾಗ ಅದನ್ನು ಪ್ರಶ್ನೆ ಮಾಡುವ ಹಕ್ಕು ಕೂಡ ಸಾರ್ವಜನಿಕರಿಗೆ ಇದೆ. ಇನ್ನು ಕೆಲವು ಪೊಲೀಸರು ಹೀರೋಗಳಾಗುವುದಕ್ಕೆ ಇತರ ಮಾಡುತ್ತಾರೆ. ಇಂತಹ ಘಟನೆ ಆಗಬಾರದು ಎಂದು ಮನವರಿಕೆ ಮಾಡಲು ಬಂದಿದ್ದೇವೆ. ಎಸಿಪಿ ಚಂದನ್ ಅವರ ಮೇಲೆ ನನಗೆ ಯಾವುದೇ ದ್ವೇಷ ಇಲ್ಲ ಎಂದರು.

ಅಬ್ದುಲ್​ ರಜಾಕ್​ ವಿರುದ್ದ ಕೇಸ್​ ದಾಖಲಿಸಿಲ್ಲ, ಪುನೀತ್​ ಅವರನ್ನ ಜೈಲಿಗೆ ಹಾಕ್ತೀರಾ?​

ಘಟನೆ ವೇಳೆ ಬಂದಂತಹ ಅಬ್ದುಲ್​ ರಜಾಕ್​ ಮೇಲೆ ಯಾವುದೇ ಕೇಸ್​ ದಾಖಲಿಸಲ್ಲ. ಆದರೆ, ಸಾರ್ವಜನಿಕರ ಹಿತದೃಷ್ಟಿಯಿಂದ ಅಲ್ಲಿಗೆ ಹೋದವರನ್ನ ಠಾಣೆಗೆ ಕರೆದುಕೊಂಡು ಬಂದು ಹಲ್ಲೆ ಮಾಡ್ತೀರಾ?, ಅವರ ಬಟ್ಟೆ ಬಿಚ್ಚಿಸುತ್ತಿರಾ ಅಥವಾ ಇಲ್ಲಿ ಸಲಿಂಗ ಕಾಮಿಗಳು ಇದ್ದಾರಾ ಎಂದು ಪೊಲೀಸರ ವಿರುದ್ದ ಕಿಡಿಕಾರಿದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 31, 2024 03:10 PM