ಕೋಲಾರ: ಮಳೆ ನೀರು ಬಿದ್ದು ಕುರುಡುಮಲೆ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿದ್ದ ಹಣ ನೀರು ಪಾಲು
ಕರ್ನಾಟಕದಾದ್ಯಂತ ಭಾರೀ ಮಳೆ ಆಗುತ್ತಿದ್ದು, ಅವಾಂತರವನ್ನೇ ಸೃಷ್ಟಿಸಿದೆ. ಕೆಲವೆಡೆ ರಸ್ತೆಗಳು ಬಂದ್ ಆಗಿದ್ದರೆ, ಪ್ರಸಿದ್ದ ದೇವಸ್ಥಾನಗಳಿಗೆ ಜಲದಿಗ್ಬಂಧನ ಉಂಟಾಗಿದೆ. ಅದರಂತೆ ಕೋಲಾರ(Kolar) ಜಿಲ್ಲೆಯ ಮುಳಬಾಗಲು ಪ್ರಸಿದ್ದ ಕುರುಡುಮಲೆ ದೇವಸ್ಥಾನಕ್ಕೆ ಮಳೆ ನೀರು ನುಗ್ಗಿದ್ದು, ಕಾಣಿಕೆ ಹುಂಡಿಯಲ್ಲಿದ್ದ ಹಣ ನೀರು ಪಾಲಾಗಿದೆ.
ಕೋಲಾರ, ಜು.31: ಕರ್ನಾಟಕದ ಹಲವೆಡೆ ಭರ್ಜರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕೆಲವು ಕಡೆಗಳಲ್ಲಿ ದೇವಸ್ಥಾನಕ್ಕೆ ಜಲದಿಗ್ಬಂಧನ ಉಂಟಾಗಿದೆ. ಅದರಂತೆ ಕೋಲಾರ(Kolar) ಜಿಲ್ಲೆಯ ಮುಳಬಾಗಲು ಪ್ರಸಿದ್ದ ಕುರುಡುಮಲೆ ದೇವಸ್ಥಾನಕ್ಕೆ ಮಳೆ ನೀರು ನುಗ್ಗಿದ್ದು, ಕಾಣಿಕೆ ಹುಂಡಿಯಲ್ಲಿದ್ದ ಹಣ ನೀರು ಪಾಲಾಗಿದೆ. ಭಕ್ತಾಧಿಗಳು ಹುಂಡಿಗೆ ಹಾಕಿದ್ದ ಹಣ ನೀರಿನಲ್ಲಿ ನೆನೆದಿದ್ದು, ನೆನೆದಿದ್ದ ಹಣವನ್ನು ಮುಜರಾಯಿ ಇಲಾಖೆ ಸಿಬ್ಬಂದಿ ಬಿಸಿಲಲ್ಲಿ ಒಣಗಿಸಿದ್ದಾರೆ. ಇನ್ನು ದೇವಸ್ಥಾನದ ಮೇಲ್ಚಾವಣಿ ಕೆಲಸ ನಡೆಯುತ್ತಿದೆ. ಈ ಹಿನ್ನಲೆ ಮಳೆ ನೀರು ಹುಂಡಿಯಲ್ಲಿ ಬಿದ್ದು ಹಣ ಹಾಳಾಗಿದೆ. ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಈ ದೇವಸ್ಥಾನಕ್ಕೆ ಭಕ್ತರು ಆಗಮಿಸುತ್ತಾರೆ. ಇದೀಗ ಭಕ್ತರು ಹಾಕಿದ್ದ ಕಾಣಿಕೆ ಹಣ ನೀರು ಪಾಲಾಗಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos