ಕಾರವಾರದ ಕೈಗಾ ಕಾಡಿನಲ್ಲಿ ಪ್ರತ್ಯಕ್ಷನಾದ ಹುಲಿರಾಯ; ದೃಶ್ಯ ಸೆರೆ
ಕಾರವಾರ ತಾಲೂಕಿನ ಕೈಗಾ ಅರಣ್ಯ ಪ್ರದೇಶದಲ್ಲಿ ಹುಲಿವೊಂದು ಪ್ರತ್ಯಕ್ಷವಾಗಿದೆ. ಹೌದು, ಮಧ್ಯಾಹ್ನದ ವೇಳೆ ಕೈಗಾ ಅರಣ್ಯದಲ್ಲಿ ಸಂಚರಿಸುತ್ತಿದ್ದ ಸಾಯಿ ಬಿಜ್ಜೂರು ಎಂಬುವವರ ಕ್ಯಾಮರಾದಲ್ಲಿ ಹುಲಿ ದೃಶ್ಯ ಸೆರೆಯಾಗಿದೆ. ಇದು ಸುಮಾರು 5-6 ವರ್ಷದ ಗಂಡು ಹುಲಿಯಾಗಿರಬಹುದೆಂದು ಅಂದಾಜು ಮಾಡಲಾಗಿದೆ.
ಉತ್ತರ ಕನ್ನಡ, ಜು.31: ಉತ್ತರ ಕನ್ನಡವು ಕರ್ನಾಟಕದಲ್ಲಿ ಅತೀ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆಯಾಗಿದ್ದು, ಹಲವಾರು ಪ್ರಾಣಿ ಪ್ರಭೇದಗಳು ಇಲ್ಲಿ ಕಂಡುಬರುತ್ತದೆ. ಜೊತೆಗೆ ಮಳೆಯ ಅಬ್ಬರ ಕೂಡ ಹೆಚ್ಚಾಗಿದ್ದು, ಅಲ್ಲಲ್ಲಿ ಗುಡ್ಡ ಕುಸಿತ ಸಂಭವಿಸುತ್ತಿವೆ. ಈ ಭೀಕರ ವರುಣಾರ್ಭಟಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ಕಾರವಾರ ತಾಲೂಕಿನ ಕೈಗಾ ಅರಣ್ಯ ಪ್ರದೇಶದಲ್ಲಿ ಹುಲಿವೊಂದು ಪ್ರತ್ಯಕ್ಷವಾಗಿದೆ. ಹೌದು, ಮಧ್ಯಾಹ್ನದ ವೇಳೆ ಕೈಗಾ ಅರಣ್ಯದಲ್ಲಿ ಸಂಚರಿಸುತ್ತಿದ್ದ ಸಾಯಿ ಬಿಜ್ಜೂರು ಎಂಬುವವರ ಕ್ಯಾಮರಾದಲ್ಲಿ ಹುಲಿ ದೃಶ್ಯ ಸೆರೆಯಾಗಿದೆ. ಇದು ಸುಮಾರು 5-6 ವರ್ಷದ ಗಂಡು ಹುಲಿಯಾಗಿರಬಹುದೆಂದು ಅಂದಾಜು ಮಾಡಲಾಗಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos