AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಯನಾಡು ಗುಡ್ಡ ಕುಸಿತ: ಜನರ ರಕ್ಷಣೆಗೆ ರಾತ್ರೋರಾತ್ರಿ ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ಸೇನೆ ಪಣ

ವಯನಾಡು ಗುಡ್ಡ ಕುಸಿತ: ಜನರ ರಕ್ಷಣೆಗೆ ರಾತ್ರೋರಾತ್ರಿ ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ಸೇನೆ ಪಣ

ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ಗಂಗಾಧರ​ ಬ. ಸಾಬೋಜಿ|

Updated on: Jul 31, 2024 | 9:48 PM

Share

ಕೇರಳದ ವಯನಾಡ್ ಜಿಲ್ಲೆಯಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಹಲವು ಕುಟುಂಬಗಳು ಜಲಸಮಾಧಿಯಾಗಿವೆ. ಈವರೆಗೆ 3 ಸಾವಿರಕ್ಕೂ ಹೆಚ್ಚು ಜನರ ರಕ್ಷಣೆ‌ ಮಾಡಲಾಗಿದ್ದು, ಮೃತರ ಸಂಖ್ಯೆ 238 ಏರಿಕೆ ಆಗಿದೆ. ಚಾಲಿಯಾರ್ ನದಿಯ ಒಂದು ಭಾಗದಲ್ಲಿ ನೂರಾರು ಜನರು ಸಿಲುಕ್ಕಿದ್ದು, ಅವರನ್ನು ಕಾಪಾಡಲು ರಾತ್ರೋರಾತ್ರಿ ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ಸೇನೆ ಮುಂದಾಗಿದೆ.

ಕೇರಳ, ಜುಲೈ 31: ಕೇರಳದ ವಯನಾಡು (Wayanad) ಜಿಲ್ಲೆಯಲ್ಲಿ ಗುಡ್ಡ ಕುಸಿದು ದುರಂತ ಪ್ರಕರಣದಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ. ವಯನಾಡು ಜಿಲ್ಲೆಯ ಚೂರಲ್ಮಲಾ ಗ್ರಾಮದ ಬಳಿ ಜನರು ಸಿಲುಕಿಕೊಂಡಿದ್ದಾರೆ. ಚಾಲಿಯಾರ್ ನದಿಯ ಒಂದು ಭಾಗದಲ್ಲಿ ನೂರಾರು ಜನರು ಸಿಲುಕಿದ್ದು, ತಿನ್ನಲು ಊಟ, ಕುಡಿಯಲು ನೀರು ಇಲ್ಲದೆ ಪರದಾಡುವಂತಾಗಿದೆ. ಸೇನಾ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಲು ಸಹ ಆಗದ ಸ್ಥಿತಿ ನಿರ್ಮಾಣವಾಗಿದ್ದು, ರಾತ್ರೋರಾತ್ರಿ ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ಸೇನೆ ಮುಂದಾಗಿದೆ. ಭಾರಿ ತೂಕದ ಕಬ್ಬಿಣದ ಬೀಮ್ ಬಳಸಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ನಾಳೆ ಬೆಳಗ್ಗೆಯೊಳಗೆ ಸೇತುವೆ ನಿರ್ಮಾಣ ಮುಗಿಸಲು ಕಮಾಂಡರ್ ಆದೇಶಿಸಿದ್ದು, ನಾಳೆ ಇದೇ ಬ್ರಿಡ್ಜ್‌ ಮೇಲೆ ಸಂಚರಿಸಿ ಸೇನೆ ರಕ್ಷಣಾ ಕಾರ್ಯ ನಡೆಸಲಿದೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.